(www.vknews.in) : ಮೌಲಾನಾ ಆಜಾದ್ ಮಾದರಿ ಶಾಲೆ ಮೂಲರಪಟ್ಣ ಇದರ ವತಿಯಿಂದ ಎಸ್ಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ಶೈಕ್ಷಣಿಕ ಮಾಹಿತಿ ಶಿಬಿರ.. ದಿನಾಂಕ 16.11.2026 ಸಮಯ ಬೆಳಗ್ಗೆ 10. ಗಂಟೆಗೆ ಮೂಲರಪಟ್ಣ ಇಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ಖಾದರ್ ನಾವೂರು (ನಿರ್ದೇಶಕರು ಇನ್ಫೋಮೇಟಿವ್ ಫೌಂಡೇಶನ್ ಕರ್ನಾಟಕ )ಹಾಗೂ ಡಾ! ಅಜ್ವೀನ ಹಸನ್ (ಲೈಫ್ ಸ್ಟಾರ್ಟ್ ಫಿಸಿಯೋಥೆರಪಿ ಫಿಟ್ನೆಸ್ ಕ್ಲಿನಿಕ್) ತಮ್ಮ ಪ್ರೇರಣಾ ಮಾತುಗಳ ಮೂಲಕ ವಿದ್ಯಾರ್ಥಿ ಹಾಗೂ ಪೋಷಕರನ್ನು ಹುರಿದುಂಬಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ಥಳೀಯ ಮಾಜಿ ಪಂಚಾಯತ್ ಸದಸ್ಯರು ಹಾಗೂ ಜಿ ಎಚ್ ಏಮ್ ಫೌಂಡೇಶನ್ ಇದರ ಗೌರವ ಸಲಹೆಗಾರರು ಹಾಜಿ ಎಂ ಬಿ ಅಶ್ರಫ್ ಮೂಲರಪಟ್ಣ, ಜಿ ಎಚ್ ಏಮ್ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರು ಜ ಹಂಝ ಗುತ್ತು, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮೂಲರಪಟ್ನ ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಏಚ್ ಸಿಯಾಬುದ್ದೀನ್ , ಎಂ ಮೊಹಮ್ಮದ್ , ಇಬ್ರಾಹಿಂ ಗುತ್ತು, ಇಮ್ತಿಯಾಜ್ ಕುಪ್ಪೆಪದವು ಮುಂತಾದವರು ಉಪಸ್ತಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸುಪ್ರೀತಾ ಕುಮಾರಿ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿ ಸಹನಾ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ವಿದ್ಯಾಭ್ಯಾಸ ಜೊತೆಗೆ ಭವಿಷ್ಯ ನಿರ್ಮಾಣ ಮಾಡಲು ಅವಕಾಶ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಂದರ್ಬೋಚಿತ ಮಾತುಗಳನ್ನು ಸಂಪನ್ಮೂಲ ವ್ಯಕ್ತಿಗಳು ಮನದಟ್ಟಾಗುವಂತೆ ವಿವರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.