(www.vknews.com) : ಶಾರ್ಜಾ ದಲ್ಲಿ ಪ್ರತಿಸ್ಟಿಯ ಕಂಪನಿಯಾದ ಹಲ್ ಫುಥೈನ್ ನ ಹೋಂಡಾ ಕಂಪನಿಯಲ್ಲಿ ಕೆಲಸ ದಲ್ಲಿದ್ದ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ಯಾದ ಸಂದೀಪ್ ನಾಯಕ್ ಎಂಬವವನು ಫೇಸ್ ಬುಕ್ ನಲ್ಲಿ ಇಸ್ಲಾಂ ವಿರೋಧಿ ಕಾಮೆಂಟ್ ಹಾಕಿದ್ದನು. ವಿದೇಶದಲ್ಲಿ ಕೂತು ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಹರಡುವವರಿಗೆ ಇದು ಸಕಾಲವಲ್ಲ. ಅದ್ಯಾವುದೋ ಭ್ರಮೆಯಲ್ಲಿ ಒಂದು ಕೌಮಿನ ಮೇಲೆ ಕಿಡಿಕಾರಿ ಅವಹೇಳನೆ ಮಾಡಿದರೆ ಏನಾಗುತ್ತದೆ ಎಂಬುವುದಕ್ಕೆ ಈ ಘಟನೆ ಸೂಕ್ತ ನಿದರ್ಶನ.
ಸಂದೀಪ್ ನಾಯಕ್ ಇತ್ತೀಚೆಗೆ ಫೇಸ್ ಬುಕ್ಕಿನಲ್ಲಿ ದ್ವೇಷ ಹರಡುವ ರೀತಿಯಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಪೋಸ್ಟ್ವೊಂದನ್ನು ಹಾಕಿದ್ದರು. ನೋಡ ನೋಡುತ್ತಲೇ ಈ ಕಮೆಂಟ್ ವೈರಲ್ ಆಗಿ ಹೋಯ್ತು. ಸಂದೀಪ್ ನಾಯಕ್ ಕೆಲಸ ಮಾಡುತ್ತಿದ್ದ ಕಂಪೆನಿಯ ಗಮನಕ್ಕೂ ಬಂತು. ಕೋಮು ದ್ವೇಷ ಹರಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾನದಂಡದ ಮೇರೆಗೆ ಇಸ್ಲಾಮೋಫೋಬಿಯಾ ಹೊಂದಿದ್ದ ಸಂದೀಪ್ ನಾಯಕ್ ಅವರನ್ನು ಕೆಲಸದಿಂದ ವಜಾಗೊಳಿಸಿತು ಸಂಸ್ಥೆ. ಮೊದಲೇ ಮುಸ್ಲಿಂ ಸರ್ವಾಧಿಕಾರ ರಾಷ್ಟ್ರಗಳ ಪೈಕಿ ಯುಎಇ ಕೂಡ ಒಂದು.
ಆದರೆ, ತನ್ನ ಕಮೆಂಟ್ ತನಗೆ ಮುಳುವಾಗುತ್ತಿದೆ ಎಂದು ಗೊತ್ತಾದ ಕೂಡಲೇ ಅವಾಂತರಕ್ಕೆ ವೇದಿಕೆಯಾಗಿದ್ದ ಫೇಸ್ ಬುಕ್ಕಿನಲ್ಲೇ ಕ್ಷಮೆಯನ್ನೂ ಕೇಳಿದ್ದರು.ಇದರ ಜತೆಗೆ ಘಟನೆ ನಡೆಯೋದಕ್ಕು ಕೆಲವು ದಿನಗಳ ಹಿಂದೆ ಭಾರತ ಮೂಲದ ಇಬ್ಬರು ವ್ಯಕ್ತಿಗಳು ಇದೇ ರೀತಿಯಾಗಿ ಪೂರ್ವಾಗ್ರಹ ಪೀಡಿತವಾಗಿ ದ್ವೇಷ ಹರಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದರು. ಮಿತೇಶ್ ಉದೇಸಿ ಹಾಗೂ ಸುಮೀತ್ ಭಂಡಾರಿ ಎಂಬ ಇಬ್ಬರು ಹೀಗೆಯೇ ಮಾಡಿ ದುಬೈ ಪೊಲೀಸರ ವಶದಲ್ಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
The people in India should learn a lesson from these actions. UAE is not dependent on India. We are dependent on UAE jobs. They can replace us using English speaking Africans or Srilankans. Millions of Indians are working there so be careful on what you are posting.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.