(www.vknews.com) : ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) ಹಾಗೂ ವಿಶ್ವಮಾನವ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸೇನೆ ವತಿಯಿಂದ ಅನೇಕಲ್ ತಾಲ್ಲೂಕು ಕಾವಲಹೊಸಹಳ್ಳಿಯ ಜನತಾ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ “ಬೃಹತ್ ರಕ್ತದಾನ ಶಿಬಿರ” Blood donation camp ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಿಂತಕರು ಹಾಗೂ ವಕೀಲರಾದ ಆನಂದ್ ಚಕ್ರವರ್ತಿ ರವರು ಮಾತನಾಡಿ “ಆಪತ್ತಿನಲ್ಲಿರುವ ರೋಗಿಗಳಿಗೆ ಉಚಿತ ರಕ್ತಪೂರೈಕೆ ಮಾಡುವ ಮೂಲಕ ಸಮಾಜಮುಖಿ ಚಿಂತನೆಯ ಹಾದಿಯಲ್ಲಿ ಸಾಗುತ್ತಿರುವ ಯುವ ಜನಾಂಗಕ್ಕೆ ಶುಭಹಾರೈಸಿ, ಶಿಸ್ತು ನಮ್ಮ ಜೀವನದಲ್ಲ್ಲಿ ಬಹಳ ಅವಶ್ಯ, ವಿಶ್ವಮಾನವ ಕುವೆಂಪು, ಅಂಬೇಡ್ಕರ್ ರವರ ಹಾದಿಯಲ್ಲಿ ನಾವೆಲ್ಲರೂ ಸಾಗೋಣಾ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರು, ದಲಿತ ಮುಖಂಡರಾದ ಮುನಿರಾಜ್ ರವರು ಮಾತನಾಡಿ ” ಜೀವ ಉಳಿಸಲು ರಕ್ತ ಬಹಳ ಪ್ರಮುಖವಾದದ್ದು, ಆ ನಿಟ್ಟಿನಲ್ಲಿ ಕರೋನಾ ಎಂಬ ಮಹಾಮಾರಿ ಇದ್ದರು ಸಹ ಇಂದು ರಕ್ತದಾನ ಮಾಡಲು ಬಂದಿರುವ ಎಲ್ಲಾ ರಕ್ತದಾನಿಗಳಿಗೆ ಅಭಿನಂದನೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ದಂತ ವೈದ್ಯಾಧಿಕಾರಿಗಳಾದ ಡಾ.ಕೇಶವಮೂರ್ತಿ ರವರು ಮಾತನಾಡಿ “ವಿಶ್ವಮಾನವ ಕುವೆಂಪುರವರ ಸಂದೇಶದ ಬಗ್ಗೆ ಮಾತನಾಡಿ ರಕ್ತದಾನದ ಜಾಗೃತಿ ಮೂಢಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ಆರ್.ಎಂ.ರಮೇಶ್ ರವರು ಮಾತನಾಡಿ “ಸೂರ್ಯಗ್ರಹಣ ಎಂಬ ಮೌಢ್ಯತೆಯಲ್ಲಿ ರಕ್ತದಾನ ಎಂಬ ಪವಿತ್ರವಾದ ಜೀವ ಉಳಿಸುವ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ ಯುವ ಉತ್ಸಾಹಿಗಳಿಗೆ ಶಕ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ವೆಂಕಟೇಶ್ ಎಂಬುವವರಿಗೆ ರಕ್ತದಾನಿ ಪ್ರಶಸ್ತಿ, ಸುನೀಲ್ ರವರಿಗೆ ಜೀವ ರಕ್ಷಕ ಪ್ರಶಸ್ತಿ, ಹಾಗೂ ಆಶಾ ಕಾರ್ಯಕರ್ತೆ ಇವರಿಗೆ ಆರೋಗ್ಯ ಸೈನಿಕ ಪ್ರಶಸ್ತಿಯನ್ನು VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ ನಾಗರಾಜ್ ಸಮರ್ಪಣೆ ಮಾಡಿ ಸನ್ಮಾನ ಮಾಡಲಾಯಿತು.
ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ 45 ಯೂನಿಟ್ ರಕ್ತವನ್ನು Lifecare blood bank ಗೆ ನೀಡುವ ಮೂಲಕ ಮಾನವೀಯತೆ ಮೆರೆಯಲಾಯಿತು.
VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ ನಾಗರಾಜ್, ಬಹುಜನ ದಲಿತ ಸಂಘರ್ಷ ಸಮಿತಿ BDSS ರಾಜ್ಯ ಅಧ್ಯಕ್ಷ ಆರ್.ಎಂ.ರಮೇಶ್, ಗ್ರಾಮಪಂಚಾಯಿತಿ ಸದಸ್ಯರಾದ ಮುನಿರಾಜ್, ದಲಿತ ಮುಖಂಡರು ರಾವಣ, ಚಿಂತಕರಾದ ಆನಂದ್ ಚಕ್ರವರ್ತಿ, ವಕೀಲ್ ಶರತ್, VKF ಚಾಲಕರ ಒಕ್ಕೂಟ ಬೆಂಗಳೂರು ನಗರ ಘಟಕದ ಕಾರ್ತಿಕ್, ಉಪಾಧ್ಯಕ್ಷ ಶಶಿಕುಮಾರ್, ಡಾ.ಕೇಶವಮೂರ್ತಿ, ಪ್ರೇಮ್ ಕುಮಾರ್, ಸುನೀಲ್, ಸೂರ್ಯ, ಆನಂದ್, ಗಂಗಾ, ತಿರುಪ್ಪಳ್ಯ ಸತೀಶ್,ಕಾವ್ಯ, ಶಬಾನಾ, ಬೊಮ್ಮನಹಳ್ಳಿ ಶಿವಪ್ಪ, ಆವರದನಹಳ್ಳಿ ಹರೀಶ್, ಇತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.