ಇಸ್ಲಾಮಿನ ವಿರುದ್ದದ ಎಲ್ಲಾ ಆರೋಪಗಳು ದುರುದ್ದೇಶ ಪೂರಿತ..
(ವಿಶ್ವ ಕನ್ನಡಿಗ ನ್ಯೂಸ್) : ಹಣ್ಣು ನೀಡುವ ಮರಕ್ಕೆ ಕಲ್ಲೆಸೆಯುವುದು ಸರ್ವೆ ಸಾಮಾನ್ಯ. ತಮ್ಮ ಬಟ್ಟಲಲ್ಲಿ ಹೆಗ್ಗಣ ಸತ್ತು ಬಿದ್ದರೂ ಇತರರ ಬಟ್ಟಲಿನ ಇರುವೆಯತ್ತ ಬೊಟ್ಟು ಮಾಡುವವರ ಮಾನಸಿಕತೆ ಪರೀಕ್ಷೆಗೆ ಒಳಪಡ ಬೇಕಾಗುತ್ತದೆ. ನಮ್ಮಲ್ಲಿ ಕೆಲವರಿಗೆ ಮುಸ್ಲಿಮರನ್ನು ಕೆದಕುವುದೆಂದರೆ ಎಲ್ಲಿಲ್ಲದ ಉತ್ಸಾಹ. ಹಾಗೆ ನೋಡಿದರೆ ಇವರ ಪೂರ್ವಿಕರೂ ಇದೇ ರೀತಿ ಇಸ್ಲಾಮನ್ನು ಗೇಲಿ ಮಾಡಿ ಕೊನೆಗೂ ಇಸ್ಲಾಮಿನಲ್ಲಿ ಅಡಗಿದ ಮಾನವೀಯ ಮೌಲ್ಯಗಳಿಗೆ ಮನ ಸೋತು ಇಸ್ಲಾಮಿನ ಅನುಯಾಯಿಗಳಾಗಿ ಮಾರ್ಪಟ್ಟು ಇಂದು ಜಗತ್ತಲ್ಲೇ ದ್ವಿತೀಯ ಧರ್ಮವಾಗಿ ಇಸ್ಲಾಂ ಗುರುತಿಸಿ ಕೊಂಡಿದೆ.
ನಿಜ ಹೇಳೋದಾದರೆ ಇಸ್ಲಾಂ ಧರ್ಮದ ವಿಶ್ವಾಸ ನಂಬಿಕೆಗಳಿಗೆ ಮನುಷ್ಯನಷ್ಟೇ ಇತಿಹಾಸವಿದೆ. ಆದಿ ಮಾನವ ಏಕದೇವಾರಾಧನಾಗಿದ್ದ. ನಂತರ ಕಾಲಾಕಾಲದಲ್ಲಿ ಪ್ರವಾದಿಗಳು ಬಂದು ದೇವ ಸಾನಿದ್ಯವನ್ನು ಮತ್ತು ಪರಲೋಕದ ಸ್ವರ್ಗ ನರಕದ ಬಗ್ಗೆ ಜನರಿಗೆ ತಿಳಿಹೇಳಿದರು. ಪ್ರವಾದಿಗಳ ಕೊನೆಯ ಕೊಂಡಿಯಾಗಿ ಮುಹಮ್ಮದ್ ಸ ಅ ಆಗಮಿಸಿ ಅಂತ್ಯ ದಿನದ ತನಕ ಬರುವ ಮಾನವನಿಗೆ ಮಾರ್ಗದರ್ಶನ ನೀಡಿ ತನ್ನ ನಂತರ ಈ ದೌತ್ಯವನ್ನು ದೇವ ಭಯವಿರುವ ಉಲಮಾಗಳು ನಿರ್ವಹಿಸುವರು ಎಂದು ಸೂಚಿಸಿ ನಿರ್ಗಮಿಸಿದರು.
ಆದರೆ ಸ್ವಚ್ಚಂದ ವಿಹಾರಿಗಳು,ಅಧಿಕಾರಮೋಹಿಗಳು,ಬಂಡವಾಳ ಶಾಹಿಗಳು,ಅನ್ಯಾಯದ ವಾಕ್ತಾರರು ಇಸ್ಲಾಮಿನ ವಿರುದ್ದ ಮೊದಲಿನಿಂದಲೇ ಪಿತೂರಿ ನಡೆಸುತ್ತಲೇ ಬಂದಿದ್ದಾರೆ. ಇದರ ಉದ್ಘಾಟಕ ಸಾಕ್ಷಾತ್ ಶೈತಾನ್ ಆಗಿದ್ದನು. ಆದಂ ಎಂಬ ಆದಿಮಾನವನ ವಿರುದ್ದ ಷಡ್ಯಂತ್ರ ರೂಪಿಸಿದ್ದೇ ಈ ಇಬ್ಲೀಸ್ ಆಗಿದ್ದ. ಈ ಶೈತಾನನ ಸಂತಾನ ಅಂತ್ಯ ದಿನದ ತನಕ ಸತ್ಯ ವಿಶ್ವಾಸಿಯನ್ನು ದಾರಿ ತಪ್ಪಿಸಲು ಪ್ರಯತ್ನ ಪಡುತ್ತಿರುತ್ತಾರೆ.
ಹಾಗೆ ನೋಡಿದರೆ ಮುಹಮ್ಮದ್ ಸ ಅ ರ ಕಾಲದಲ್ಲೇ ಅವರಿಗೆ ವಿರೋಧವೂ ಇತ್ತು. ಆದರೆ ಇಸ್ಲಾಮಿನ ತತ್ವ ಸಿದ್ದಾಂತದ ಪ್ರಭೆಯ ಮುಂದೆ ಅವೆಲ್ಲವೂ ಮಾಸಿಹೋಯಿತು. ಇಸ್ಲಾಮಿನ ಸೌಂದರ್ಯ ಜಗತ್ತಿನಾದ್ಯಂತ ವ್ಯಾಪಿಸಿ ಇಂದು ಜಗತ್ತಿನ ಎರಡನೇ ಸ್ಥಾನದಲ್ಲಿ ಮುಸ್ಲಿಂ ಜನಾಂಗ ತಲೆ ಎತ್ತಿ ನಿಂತಿದೆ. ಸಮಾಧಾನಕರ ವಿಚಾರವೇನೆಂದರೆ ಇಂದು ಜಗತ್ತಿನ ಹೆಚ್ಚಿನ ಕಡೆಗಳಲ್ಲಿ ಇಸ್ಲಾಮಿನ ವಿರುದ್ದದ ಶತ್ರುತ್ವಾ ಮನೋಭಾವ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿರುವುದು.
ಇಸ್ಲಾಮಿನ ಹೆಸರಲ್ಲಿ ಅಜ್ಞಾನಿಗಳನ್ನು ಬಳಸಿ ಕೆಲವೊಂದು ಪಾಶ್ಚಿಮಾತ್ಯ ಶಕ್ತಿಗಳು ಹುಟ್ಟು ಹಾಕಿದ ಭಯೋತ್ಪಾದಕ ಕೃತ್ಯಗಳಿಂದಾಗಿ ಕಳೆದ ಹಲವು ವರ್ಷಗಳ ಕಾಲ ಮುಸ್ಲಿಮರನ್ನು ಮತ್ತು ಇಸ್ಲಾಮನ್ನು ಕಟಕಟೆಯಲ್ಲಿ ನಿಲ್ಲಿಸಲು ಸಂಧರ್ಭವನ್ನು ಬಳಸಿಕೊಂಡ ಸ್ವಾರ್ಥಿಗಳು ಪ್ರಚಂಡ ಅಪ ಪ್ರಚಾರದ ಮೂಲಕ ಕೆಲವೊಂದು ಮುಗ್ದರ ಬ್ರೈನ್ ವಾಶ್ ಮಾಡಲು ಪ್ರಯತ್ನಿಸಿದ್ದರು. ಅದರ ಮುಂದುವರೆದ ಭಾಗವೇ ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಕೋಮು ಪ್ರೇರಿತ ಘಟನಾವಳಿಗಳು.
ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಮತ್ತು ಎಲ್ಲಾ ಮತದ ಆಚಾರ ವಿಚಾರಗಳನ್ನು ಗೌರವಿಸುವ , ಇಸ್ಲಾಂ ಮತ್ತು ಮುಸ್ಲಿಮರಿಗೆ ಈ ದೇಶದಲ್ಲಿ ನೆಲೆ ನೀಡಿ ಅದರ ಬೆಳವಣಿಗೆಗೆ ಕಾರಣ ಕರ್ತರಾದ ಸಹಿಷ್ಣುಗಳಾದ ಹಿಂದೂ ಬಾಂದವರನ್ನು ಕೆಲ ವೈದಿಕ ಕುತಂತ್ರಿಗಳು ಯಾಮಾರಿಸುತ್ತಿದ್ದು ಸಾದ್ಯಂತ ತಾವು ಅನುಭವಿಸಿ ಕೊಂಡು ಬರುತ್ತಿರುವ ಅಧಿಕಾರವನ್ನು ಭದ್ರ ಪಡಿಸಿ ಕೊಳ್ಳಲು ಮತ್ತು ತಮ್ಮ ಸೈದ್ದಾಂತಿಕ ಅನಾಚಾರವನ್ನು ಮೆರೆಮಾಚಲು ಕಂಡು ಹಿಡಿದ ದಾರಿಯೇ ಇಸ್ಲಾಮಿನ ಬಗ್ಗೆ ವ್ಯಾಪಕ ಅಪ ಪ್ರಚಾರ ಮಾಡುವುದು.
ಈ ಮೂಲಕ ತಮ್ಮ ಎಲ್ಲಾ ಕೊರತೆ, ನೂನ್ಯತೆಗಳು ಜನರ ಮುಂದೆ ಬಾರದಂತೆ ನೋಡಿಕೊಳ್ಳಲು ಅವರಿಗೆ ಸಾದ್ಯವಾಗುತ್ತದೆ. ಆದಾಗ್ಯೂ ಇಸ್ಲಾಮಿನ ತತ್ವಾದರ್ಶಗಳ ಬಗ್ಗೆ ಇವರು ಮಾಡುತ್ತಿರುವ ಅಪ ಪ್ರಚಾರ ಉದ್ದೇಶಿತ ಫಲ ನೀಡದಿರುವಾಗ ಈಗ ಪ್ರವಾದಿ ಸ ಅ ರ ಮದುವೆಯ ಬಗ್ಗೆ ಇವರು ಬಹಳ ವ್ಯವಸ್ಥಿತವಾಗಿ ಅಪ ಪ್ರಚಾರ ಮಾಡುತ್ತಿರುವುದು ಕಂಡು ಬರುತ್ತದೆ.
ಹಾಗೇ ನೋಡಿದರೆ ಇಲ್ಲಿ ಸಣ್ಣ ಪ್ರಾಯದ ಹುಡುಗಿಯರನ್ನು ಮದುವೆಯಯಾದವರ ಲೀಸ್ಟ್ ನೋಡಿದರೆ ಇತರ ಧರ್ಮೀಯ ಮುಖಂಡರ ಉದ್ದದ ಪಟ್ಟಿಯೇ ಇದೆ. ಶ್ರೀ ಕೃಷ್ಣ ಭಗವಂತನ ಬಗ್ಗೆ ಇರುವ ಕಥೆಗಳನ್ನ ನೆನಪಿಸಿ ಹಿಂದೂಗಳ ಮನಸ್ಸಿಗೆ ಘಾಸಿ ಮಾಡುವ ಪ್ರಮಾದಕ್ಕೆ ಯಾವತ್ತೂ ಮುಸ್ಲಿಮರು ಇಳಿದಿಲ್ಲ. ಒಂದಕ್ಕಿಂತ ಹೆಚ್ಚು ಮದುವೆಯಾಗುವ ಪದ್ದತಿ ಎಲ್ಲಾ ಧರ್ಮದಲ್ಲಿ ಇದೆಯಾದರೂ ಶತ್ರುಗಳು ಟೀಕಿಸುವುದು ಇಸ್ಲಾಮಿನ ಮದುವೆ ಪದ್ದತಿಯನ್ನು ಮಾತ್ರ.
ಅದೇ ರೀತಿ ಇತಿಹಾಸದಲ್ಲಿ ರಾಜ ಮಹಾರಾಜರುಗಳ ಮಧ್ಯೆ ಸಾಕಷ್ಟು ಯುದ್ದ ನಡೆದಿದ್ದರೂ ಈಗ ಮುಸ್ಲಿಂ ರಾಜರು ಮಾಡಿದ ಯುದ್ದಗಳು ಮಾತ್ರ ಚರ್ಚೆಯಾಗುತ್ತಿದೆ. ಹಿಂದೂ ರಾಜರೇ ಚಿನ್ನ, ಬೆಳ್ಳಿ ಲೂಟಿ ಹೊಡೆಯಲು ಎಷ್ಟೋ ದೇವಸ್ಥಾನಗಳನ್ನು ದ್ವಂಸ ಮಾಡಿದ್ದರೆ ಈಗ ಚರ್ಚೆ ಆಗುತ್ತಿರುವುದು ಮುಸ್ಲಿಂ ರಾಜರು ಮಾಡಿದ ಲೂಟಿ ಮಾತ್ರ.
ಎಲ್ಲಾ ಧರ್ಮೀಯರೂ ಪ್ರಾಣಿ ಪಕ್ಷಿ ಗಳನ್ನು ಕೊಂದು ತಿನ್ನುತ್ತಿರುವಾಗ ವಿವಾದ ಆಗುತ್ತಿರುವುದು ಮುಸ್ಲಿಮರ ಮಾಂಸಹಾರ ಪದ್ದತಿ ಮಾತ್ರ. ಎಲ್ಲಾ ಧರ್ಮದಲ್ಲೂ ಏಕ ದೇವ ಸಿದ್ದಾಂತಕ್ಕೆ ಪ್ರಾಮುಖ್ಯತೆ ಇದ್ದರೂ ಟೀಕಿಸುತ್ತಿರುವುದು ಇಸ್ಲಾಮಿನ ದೇವ ಸಂಕಲ್ಪವನ್ನು ಮಾತ್ರ. ಪಾಪ ಪುಣ್ಯ ಸ್ವರ್ಗ ನರಕದ ಸಂಕಲ್ಪ ಎಲ್ಲಾ ಧರ್ಮದಲ್ಲಿ ಇದ್ದರೂ ಟೀಕೆಗೆ ಗುರಿಯಾಗುವುದು ಇಸ್ಲಾಮಿನ ಸಂಕಲ್ಪ ಮಾತ್ರ. ಹೀಗೆ ಎಲ್ಲದರಲ್ಲೂ ಮುಸ್ಲಿಮರನ್ನು ಮತ್ತು ಇಸ್ಲಾಮನ್ನು ಟೀಕಿಸುವ ಒಂದು ವಿಭಾಗದ ಉದ್ದೇಶ ಮಾತ್ರ ಅತ್ಯಂತ ಸ್ಪಷ್ಟವಾಗಿದೆ.
ತಮ್ಮ ಮೌಡ್ಯವನ್ನು ಮತ್ತು ಮೇದಾವಿತ್ವವನ್ನು ಜನರು ಪ್ರಶ್ನಿಸಿ ತಮ್ಮ ವಿರುದ್ದ ಬಂಡಾಯ ಏಳದೇ ಇರುವಂತಾಗಲು ಇಸ್ಲಾಂ ಎಂಬ ಗುಮ್ಮವನ್ನು ಅವರ ಮುಂದೆ ತಂದು ನಿಲ್ಲಿಸಲಾಗುತ್ತೆ.ಆದರೆ ಅಸತ್ಯ ಯಾವತ್ತೂ ಗೆಲ್ಲುವುದಿಲ್ಲ. ಸತ್ಯಕ್ಕೆ ಎಂದಿಗೂ ಜಯವಿದೆ. ಈ ತುಕ್ಡೇ ತುಕ್ಡೇ ಗ್ಯಾಂಗಿನ ಉದ್ರೇಕ ಭಾಷಣಕ್ಕೆ ಕೊಚ್ವಿ ಹೋಗುವುದಲ್ಲ ಇಸ್ಲಾಮ್ ಧರ್ಮ. ಅವರು ತಮ್ಮ ಬಾಯಿಂದ ಅಲ್ಲಾಹನ ಪ್ರಕಾಶವನ್ನು ಊದಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅಲ್ಲಾಹು ಅದನ್ನು ಪೂರ್ತಿಗೊಳಿಸುವನು (ಕುರ್ಆನ್)
– ಎಸ್ ಬಿ ದಾರಿಮಿ. ಅದ್ಯಕ್ಷರು ಜಂಇಯ್ಯತ್ತುಲ್ ಖುತಬಾ ದ ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.