(www.vknews.in) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಅಪ್ ಇಂಡಿಯಾ ಸೋಮೇಶ್ವರ ಪುರಸಭಾ ಸಮಿತಿ ಉಚ್ಚಿಲ SDPI ಪಕ್ಷದ 13’ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಉಚ್ಚಿಲ ಗುಡ್ಡೆ ರಹ್ಮಾನಿಯ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬಳಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸೋಮೇಶ್ವರ ಪುರಸಭಾ ಸಮಿತಿಯ ಉಪಾಧ್ಯಕ್ಷರಾದ ಮೊಯ್ದಿನ್ ಕುಟ್ಟಿ ತಲಪ್ಪಾಡಿ ಅದ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.
SDPI ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆ. ಸಿ ರೋಡ್ ಮುಖ್ಯ ಭಾಷಣ ಮಾಡುತ್ತಾ ಗ್ರಾಮ ಗ್ರಾಮಗಳಲ್ಲಿ ಪಕ್ಷದ ಕಾರ್ಯ ಕರ್ತರ ಅವಿರತ ಶ್ರಮದ ಮೂಲಕ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿರುವುದ ನಾವು ಕಂಡಿದ್ದೇವೆ. ಪಕ್ಷದ ಕಾರ್ಯಕರ್ತರು ಹೋರಾಟಗಳನ್ನು ಮಾಡುತ್ತಾ ಬಂದಿರುವರು. SDPI ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿರುವರು ಎಂಬ ಕಾರಣಕ್ಕೆ ಪಕ್ಷದ ಕಾರ್ಯಕರ್ತರ ರಕ್ತವನ್ನು ಈ ಭೂಮಿಯ ಮೇಲೆ ಚೆಲ್ಲಿದಂತಹ ಘಟನೆ, ಕೊಲೆಗೆಯ್ಯಲಟ್ಟಂತಹ ಘಟನೆಗಳು ಇಲ್ಲಿ ನಡೆದಿದೆ. ಇದೆಲ್ಲದರ ಪ್ರತೀಕ ಈ ಪಕ್ಷ ಈ ಮಟ್ಟಕ್ಕೆ ಬೆಳೆದು ನಿಂತಿದೆ.
ಆದರೆ ವಿರೋಧಿಗಳಿಗೆ SDPI ಪಕ್ಷದ ಶಕ್ತಿ ಏನು ಎಂಬುದು ಅರ್ಥ ಆಗಿದೆ ಆ ಕಾರಣಕ್ಕಾಗಿ ಗೋಧಿ ಮೀಡಿಯಾದಲ್ಲಿ ಪ್ರತೀದಿನ SDPI ಪಕ್ಷದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿಕೊಳ್ಳುವುದ ನಾವು ಕಂಡುಕೊಂಡಿದ್ದೇವೆ. ಡಾ.ಬಿ ಆರ್ ಅಂಬೇಡ್ಕರ್ರವರು ಹೇಳುತ್ತಿದ್ದರು ನನ್ನನ್ನು ನನ್ನ ವಿರೋಧಿಗಳು ಅರ್ಥ ಮಾಡಿಕೊಂಡಿರುವರು, ಆದರೆ ನಾನು ಯಾರಿಗೋಸ್ಕರ ಹೋರಾಟ ಮಾಡುತ್ತಿದ್ದನೋ ಅವರು ನನ್ನ ಮಾತ್ರ ಅರ್ಥ ಮಾಡಿಕೊಂಡಿಲ್ಲ. SDPI ಪಕ್ಷದ ಸ್ಥಿತಿ ಆದೇ ರೀತಿ ಇದ್ಕೊಂಡಿದೆ ಆದರೆ ನಮ್ಮ ಪಕ್ಷದ ಹೋರಾಟ ಕಾರ್ಯಕ್ರಮಗಳು ನಿರಂತರವಾಗಿದೆ. ಈ ದೇಶದ ಅಧಿಕಾರವನ್ನು ನಾವು ದಲಿತ,ಧಮನಿತ,ಸೋಶಿತ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಕೊಟ್ಟು ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಸ್ವಾಭಿಮಾನದಿಂದ, ಗೌರವದಿಂದ, ಬದುಕನ್ನು ನಡೆಸುವ, ಕಟ್ಟುವ ನಿಟ್ಟಿನಲ್ಲಿ ಒಂದು ಉತ್ತಮ ಸಮಾಜ ಸರ್ಕಾರ ತರುತ್ತೇವೆ. ಈ ನಿಟ್ಟಿನಲ್ಲಿSDPI ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ.
ಆಡಳಿತ ಪಕ್ಷದ ವೈಫಲ್ಯ ಜೊತೆಗೆ ವಿರೋಧ ಪಕ್ಷದ ನಿಷ್ಕ್ರಿಯತೆ ಇದೆಲ್ಲವೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಪ್ರತಿದಿನ ಈ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿನಡೆಸಲಾಗುತ್ತೆ. ಸಿ ಎ, ಎನ್ ಆರ್ ಸಿ, ಹಿಜಾಬ್, ಆಜಾನ್, ಹಲಾಲ್, ಜಟ್ಕಾ ವಿವಾಧ , ವ್ಯಾಪಾರ ಬಹಿಷ್ಕಾರ ಈ ರೀತಿಯ ವಿವಾಧ , ಸಮಸ್ಯೆಗಳ ತಂದು ಈ ದೇಶದ ಅಲ್ಪಸಂಖ್ಯಾತ ಪ್ರಜೆಗಳ ಮೇಲೆ ಟಾರ್ಗೆಟ್ ಮಾಡುವಂತಹ ಕೃತ್ಯಗಳನ್ನು ನಿರಂತರವಾಗಿ ನಡೆಯುತ್ತಿದೆ. ಆಡಳಿತ ಪಕ್ಷಕ್ಕೆ ಕಾಳಜಿ ಇಲ್ಲದೆ ಇರಬಹುದು ಆದರೆ ವಿರೋಧ ಪಕ್ಷಕ್ಕಾದರೂ ಕಾಳಜಿ ಇರಬೇಕಿತ್ತು ಅದೂ ಇಲ್ಲ ಈ ನಿಟ್ಟಿನಲ್ಲಿ ಪರ್ಯಾಯ ರಾಜಕೀಯಕ್ಕಾಗಿ SDPI ಒಂದೇ ದಾರಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.
ನಮ್ಮ ಪಕ್ಷದ ಹೋರಾಟಗಳನ್ನು ನೀವು ನೋಡಿರಬಹುದು ಇತ್ತೀಚೆಗೆ ದಿನೇಶ್ ಕನ್ಯಾಡಿ ಆತ ಒಬ್ಬ ಕಾಂಗ್ರೆಸ್ ಕಾರ್ಯಕರ್ತ, ದಲಿತ ಸಮುದಾಯದವ ಆತನನ್ನು ಸಂಘ ಪರಿವಾರದ ಕಾರ್ಯಕರ್ತರು ಕೊಲೆಮಾಡುತ್ತಾರೆ. ಅದನ್ನು ಪ್ರತಿಭಟಿಸಲು ಆ ಪಕ್ಷದಲ್ಲಿ ನೈತಿಕತೆಯಿಲ್ಲ. ನಮ್ಮ ಪಕ್ಷವು ಬೆಳ್ತಂಗಡಿಯಿಂದ ಮಂಗಳೂರು ತನಕ ಒಂದು ಹೋರಾಟ ಜಾತಾವನ್ನು ಮಾಡಿ ಅವರಿಗೆ ಪರಿಹಾರ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಅದಲ್ಲದೆ ಹಲವು ಕಡೆಗಳಲ್ಲಿ ಚರ್ಚ್ ದಾಳಿಯಾದ ಸಂಧರ್ಭದಲ್ಲಿ ಪ್ರಶ್ನಿಸಿದ್ದು SDPI ಪಕ್ಷವಾಗಿದೆ. SDPI ಸಮುದಾಯದ ಪಾರ್ಟಿ ಎಂದು ಕರೆಯುತ್ತಿದ್ದರು, ಅದು ಈಗ ಪರಿವರ್ತನೆಯಾಗಿ ಸಮಾಜದ ಪಾರ್ಟಿಯಾಗಿರುವುದ ನಾವು ಕಂಡಿರಬಹುದು. ಈ ನಿಟ್ಟಿನಲ್ಲಿ ಬೇರೆ ಬೇರೆ ಸಮುದಾಯದ ಜನ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹೋರಾಟದ ಹಾದಿ ಇನ್ನೂ ಮುಂದಿದೆ. ಈ ದೇಶದ ಪ್ಯಾಶಿಸ್ಟ್ ಶಕ್ತಿಗಳ ಸೋಲಿಸಿ, ನಿರ್ನಾಮ ಮಾಡಿ ಈ ದೇಶವನ್ನು ಮತ್ತೆ ಸುವರ್ಣ ಯುಗಕ್ಕೆ ಯಾವ ಕನಸನ್ನು ಈ ದೇಶದ ಸ್ವತಂತ್ರ ಹೋರಾಟಗಾರರು ಕಂಡಿದ್ರೋ ಆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ನಮ್ಮ ಪಕ್ಷ ಅವಿರತವಾಗಿ ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಟೆಕಾರ್ ಪಟ್ಟಣ ಸಮಿತಿ ಅಧ್ಯಕ್ಷರಾದ ಮೊಯ್ದಿನ್ SB, ಮಹಮ್ಮದಲಿ G I, ಮನ್ಸೂರ್ ಉಚ್ಚಿಲ್, ಸದಸ್ಯರಾದ ಕರೀಂ, ಬಷೀರ್, ಇಮ್ತಿಯಾಝ್, ಜಾಫರ್, ಹನೀಫ್,ಹಾಶಿಂ, ಇಲ್ಯಾಸ್,ಮಹ್ಮೂದ್, ಷರೀಫ್, ಹಸನಬ್ಬ, ಸಮಾಜ ಸೇವಕರಾದ ಇಸ್ಮಾಯಿಲ್ C.H ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಇಬ್ರಾಹಿಂ ಲಿಮ್ರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಅಬ್ದುಲ್ ನಜೀರ್ ಯು. ಜಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.