ಯುಎಇ, ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿ ರಾಷ್ಟ್ರದಲ್ಲೂ ಕಂಪನ..
ಟೆಹ್ರಾನ್ (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಇರಾನ್ ನಲ್ಲಿ ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆಯ ಭೂಕಂಪವು ಮೂರು ಜನರನ್ನು ಬಲಿತೆಗೆದುಕೊಂಡಿದೆ, ಹಾಗು 19 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ 1.30ಕ್ಕೆ ಭೂಕಂಪ ಸಂಭವಿಸಿದೆ. ಅನೇಕ ಸ್ಥಳಗಳಲ್ಲಿ ಹಾನಿಯ ವರದಿಗಳು ಬಂದಿದ್ದವು. ದಕ್ಷಿಣ ಇರಾನಿನ ಗಲ್ಫ್ ಕರಾವಳಿಗೆ ಸಮೀಪದಲ್ಲಿರುವ ಬಂದರ್ಕಮಿರ್ ಭೂಕಂಪನದ ಕೇಂದ್ರಬಿಂದುವಾಗಿದೆ.
ಭೂಕಂಪದ ಕಂಪನಗಳು ಹತ್ತಿರದ ದೇಶಗಳಲ್ಲಿಯೂ ಅನುಭವಕ್ಕೆ ಬಂದಿವೆ. ಗಲ್ಫ್ ನ್ಯೂಸ್ ಪ್ರಕಾರ, ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಒಮನ್, ಕತಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಣ್ಣ ಭೂಕಂಪಗಳು ಸಂಭವಿಸಿವೆ. ಆದಾಗ್ಯೂ, ಎಲ್ಲಿಯೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.