ಜೆದ್ದಾ(www.vknews.in): ಪವಿತ್ರ ಹಜ್ಜ್ನ ಪ್ರಮುಖ ಆಚರಣೆಯಾದ ಅರಾಫಾದಲ್ಲಿ ಪಾಲ್ಗೊಳ್ಳಲು ಭಕ್ತರು ಅರಫಾ ಕಡೆಗೆ ತೆರಳಲು ಪ್ರಾರಂಭಿಸಿದರು. ಪ್ರಪಂಚದ ವಿವಿಧ ಭಾಗಗಳಿಂದ ಲಕ್ಷಾಂತರ ಯಾತ್ರಾರ್ಥಿಗಳು ಒಟ್ಟುಗೂಡುವುದರಿಂದ ಅರಾಫಾ ಸಂಗಮವನ್ನು ವಿಶ್ವದ ಅತಿದೊಡ್ಡ ಮಾನವ ಕೂಟವೆಂದು ಪರಿಗಣಿಸಲಾಗಿದೆ.
ಮಿನಾದಲ್ಲಿ ರಾತ್ರಿ ಕಳೆದ ಯಾತ್ರಾರ್ಥಿಗಳು ಇಂದು ಬೆಳಗಾಗುವುದರೊಳಗೆ ಅರಾಫಾಗೆ ಹರಿದು ಬರಲಾರಂಭಿಸಿದ್ದರು. ಇಂದು ಸೂರ್ಯಾಸ್ತದವರೆಗೆ ಅರಫಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಯಾತ್ರಾರ್ಥಿಗಳು ಮುಜ್ದಲಿಫಾದಲ್ಲಿ ರಾತ್ರಿ ಕಳೆಯುತ್ತಾರೆ. ಯಾತ್ರಿಕರು ಕಾಲ್ನಡಿಗೆಯಲ್ಲಿ, ಬಸ್ಸುಗಳು ಮತ್ತು ರೈಲುಗಳಲ್ಲಿ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುತ್ತಾರೆ.
ಮುಸ್ಲಿಂ ವರ್ಲ್ಡ್ ಲೀಗ್ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ವಿದ್ವಾಂಸರಾದ ಶೈಖ್ ಮುಹಮ್ಮದ್ ಅಲ್ ಇಸಾ ಅವರು ಈ ವರ್ಷ ಅರಫಾ ಕುತುಬಾ ನೆರವೇರಿಸಲಿದ್ದಾರೆ. ಎರಡು ವರ್ಷಗಳ ಸತತ ಕೊವಿಡ್ ಸಾಂಕ್ರಾಮಿಕದ ನಂತರ ಈ ವರ್ಷದ ಹಜ್ ಮತ್ತೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗುತ್ತಿದೆ.
ವಿಶೇಷ ವರದಿ: ಎಸ್.ಎ.ರಹಿಮಾನ್, ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.