ಮಂಗಳೂರು (www.vknews.in) : MOTIVITALZ – ಅಂಬೇಡ್ಕರ್ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಸೆಂಟರ್ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ STEM ಪ್ರಶಸ್ತಿಗಳು- 2022 ರಲ್ಲಿ ಪ್ಯಾನ್ ಭಾರತದಾದ್ಯಂತ ಸ್ಥಾಪಿಸಲಾದ ಅತ್ಯುತ್ತಮ ರೋಬೋಟಿಕ್ ಲ್ಯಾಬ್ ಅನ್ನು ಮಂಗಳೂರಿನ MOTIVITALZ ಸಂಸ್ಥೆಯು ಪಡೆದುಕೊಂಡಿದೆ.
ಮೊದಲ ಬಾರಿಗೆ ಮಂಗಳೂರು ಮೂಲದ MOTIVITALZ ಸಂಸ್ಥೆಗಳಲ್ಲಿ ಸ್ಥಾಪಿಸಲಾದ ಅತ್ಯುತ್ತಮ ರೊಬೊಟಿಕ್ ಲ್ಯಾಬ್ಗಾಗಿ, ಪ್ರತಿಷ್ಠಿತ ಭಾರತ STEM ಪ್ರಶಸ್ತಿ – 2022 ಪಡೆದುಕೊಂಡಿದೆ ಈ ಪ್ರಶಸ್ತಿಯನ್ನು AICRA – ಆಲ್ ಇಂಡಿಯಾ ಕೌನ್ಸಿಲ್ ಫಾರ್ ರೊಬೊಟಿಕ್ಸ್ ಮತ್ತು ಆಟೊಮೇಷನ್ ಸಂಸ್ಥೆಯು ಆಯೋಜಿಸಿತ್ತು. ಇದರೊಂದಿಗೆ MOTIVITALZ ಲೈಫ್ ಸ್ಕಿಲ್ ಡೆವಲಪ್ಮೆಂಟ್ ಮಾಡ್ಯೂಲ್ಗಳಿಗೆ ವಿಶೇಷ ಮನ್ನಣೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ MOTIVITALZ ನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ. NASREEN BINTH ಅಹ್ಮದ್ ಬಾವಾ ಮುಖ್ಯ ಭಾಷಣವನ್ನು ಮಂಡಿಸಿದರು. ಅಧ್ಯಕ್ಷರಾದ ಶ್ರೀ ಹಸನ್ ತೌಶೀದ್ ಬಾವಾ ಮತ್ತು ನಿರ್ದೇಶಕಿ ಶ್ರೀಮತಿ ಮಮತಾ ಭಂಡಾರಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.