(www.vknews.in) : ಜಮಾಅತ್ ವ್ಯಾಪ್ತಿಯ ಸಂಸಾರಗಳ ಸರ್ವೇ ನಡೆಸಿ, ಸಂಸಾರಗಳ ಸ್ಥಿತಿಗತಿಗಳ ಅಧ್ಯಯನ ನಡೆಸಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ವ್ಯವಸ್ಥಿತವಾಗಿ ಕಾರ್ಯಾಚರಿಸಬೇಕು, ಅದಕ್ಕಾಗಿ ಶಿಸ್ತುಬದ್ದ, ನಿರಂತರತೆ ಇರುವ ಯೋಜನೆಯನ್ನು ಪ್ರತೀ ಜಮಾಅತ್ ಕಮೀಟಿಗಳು ರೂಪಿಸಬೇಕು ಎಂದು ಸುಳ್ಯ ಗಾಂಧಿನಗರದ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಕೆ.ಎಂ ಮುಸ್ತಫಾ ಅಭಿಪ್ರಾಯ ಪಟ್ಟರು. ಸುಳ್ಯದ ಪ್ರಮುಖರ ನಿಯೋಗದೊಂದಿಗೆ ಪುತ್ತೂರು ಕಮ್ಯೂನಿಟಿ ಸೆಂಟರಿಗೆ ಭೇಟಿ ನೀಡಿದ ಅವರು ಸಂಸ್ಥೆ ರೂಪಿಸಿದ ಸರ್ವೆ ಫಾರ್ಮೆಟ್ಟನ್ನು ಸ್ವೀಕರಿಸಿ ಸೆಂಟರಿನ ಕಾರ್ಯ ಯೋಜನೆಗಳ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.
ಕಮ್ಯೂನಿಟಿ ಸೆಂಟರ್ ಸಮುದಾಯದ ಬೇಡಿಕೆಯನ್ನು ಅರಿತು ದುಡಿಯುತ್ತಿದೆ. ಅದ್ಯಯನ, ಅಂಕಿ ಅಂಶ ಆದಾರಿತ ಕಾರ್ಯತಂತ್ರ, ಯೋಜನೆಗಳ ನಿರ್ವಹಣೆ, ಅದರ ದಾಖಲೆಗಳ ಸಂಗ್ರಹದಲ್ಲಿ ಅತ್ಯುತ್ತಮ ವಿದಾನ ಇಲ್ಲಿದೆ. ಇದೇ ಮಾದರಿಯ ಸೆಂಟರ್ ಸುಳ್ಯದಲ್ಲೂ ನಿರ್ಮಿಸಲು ಆಸಕ್ತಿ ಇದ್ದರೆ ಅದಕ್ಕೆ ಬೇಕಾದ ಸಹಕಾರ ಮತ್ತು ಅನುಕೂಲತೆಯನ್ನು ಮಾಡಿ ಕೊಡಲಿದ್ದೇವೆ. ಪುತ್ತೂರು ಕಮ್ಯೂನಿಟಿ ಸೆಂಟರ್ ನ ಮಾರ್ಗದರ್ಶನ ಮತ್ತು ಮಾದರಿಯಲ್ಲೇ ಅದು ಮುನ್ನಡೆಯಲಿ ಎಂದು ಅವರು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಜಾಗತಿಕ ಬೇಡಿಕೆ ಮತ್ತು ಬೆದರಿಕೆಯನ್ನು ಅರಿತು ದುಡಿಯಬೇಕಾಗಿದೆ. ಅದಕ್ಕೆ ಸೆಂಟರ್ ಆಲೋಚನೆಯನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ರೂಪಿಸಲು ಕಾರ್ಯತಂತ್ರಗಳನ್ನು ಮಾಡುತ್ತಿರುವುದನ್ನು ಕೆ.ಎಂ ಮುಸ್ತಫಾರವರು ಅಭಿನಂದಿಸಿದರು.
ನಿಯೋಗದಲ್ಲಿ ಗ್ರೀನ್ ವ್ಯೀವ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನಿರ್ಧೇಶಕರಾದ ಎಸ್. ಎಂ ಹಮೀದ್, ಕೆ.ಎಸ್ ಉಮರ್, ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ನ ನಿರ್ಧೇಶಕರಾದ ಅಬ್ದುಲ್ ಹಮೀದ್ ಬೀಜಕೋಚಿ, ಜುಮ್ಮಾ ಮಸೀದಿ ಗಾಂಧಿ ನಗರ ಇದರ ಪ್ರಧಾನ ಕಾರ್ಯದರ್ಶಿ ಕೆ.ಬಿ ಅಬ್ದುಲ್ ಹಮೀದ್ ಜೊತೆಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.