ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ದುಬೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬ್ಲಾಗರ್ ರಿಫಾ ನಿಗೂಢ ಸಾವಿನ ಪ್ರಕರಣದಲ್ಲಿ ಅವರ ಪತಿ ಮೆಹನಾಜ್ ನನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸಲಾಗಿದೆ. ವಿವಾಹದ ವೇಳೆ ರಿಫಾ ಅಪ್ರಾಪ್ತ ವಯಸ್ಸಿನವಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತಾಮರಸ್ಸೆರಿ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವು ಮೆಹನಾಸ್ ಅವರನ್ನು ಕಾಸರಗೋಡಿನ ಮನೆಯಿಂದ ಕಸ್ಟಡಿಗೆ ತೆಗೆದುಕೊಂಡಿದೆ. ಮೆಹನಾಸ್ನನ್ನು ಕೋಝಿಕ್ಕೋಡ್ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಿಫಾ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮೆಹನಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಬಗ್ಗೆ ಹೈಕೋರ್ಟ್ ತೀರ್ಪು ನೀಡುವ ಮೊದಲು ಮೆಹನಾಜ್ ಅವರ ಬಂಧನವಾಗಿದೆ.
ಕೋಯಿಕ್ಕೋಡ್ ಬಲುಸ್ಸೆರಿ ನಿವಾಸಿಯಾದ ರಿಫಾ ಫೆಬ್ರವರಿ ಅಂತ್ಯದಲ್ಲಿ ದುಬೈನ ಜಾಫಿಲಿಯಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅವರು ತಮ್ಮ ಪತಿ ಮೆಹನಾಜ್ ಅವರೊಂದಿಗೆ ವಾಸಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಿಫಾ ಅವರ ಸಾವಿನಲ್ಲಿ ನಿಗೂಢತೆ ಇದೆ ಎಂದು ಅವರ ಕುಟುಂಬವು ಆರೋಪಿಸಿತ್ತು. ಅಂತ್ಯಸಂಸ್ಕಾರದ ಎರಡು ತಿಂಗಳ ನಂತರ, ಶವವನ್ನು ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.