ಭೋಪಾಲ್ (ವಿಶ್ವ ಕನ್ನಡಿಗ ನ್ಯೂಸ್) : ಕಳ್ಳತನದ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ದಲಿತ ಯುವಕನ ಮೇಲೆ ಗುಂಪೊಂದು ಥಳಿಸಿದೆ. ಖಾರ್ಗೋನ್ ಜಿಲ್ಲೆಯ ನಿಮ್ರಾಣಿ ಎಂಬಲ್ಲಿ ಆದಿತ್ಯ ರೋಕ್ಡೆ ಎಂಬ ದಲಿತ ಯುವಕನನ್ನು ಬರ್ಬರವಾಗಿ ಥಳಿಸಲಾಯಿತು. ರಾಷ್ಟ್ರೀಯ ಮಾಧ್ಯಮ ‘ದಿ ಕ್ವಿಂಟ್’ ಕೂಡ ದಾಳಿಯ ಸಂದರ್ಭದಲ್ಲಿ ಯುವಕನ ಧರ್ಮವನ್ನು ಗುರುತಿಸಲು ಆತನ ಬಟ್ಟೆಗಳನ್ನು ಬಿಚ್ಚಿರುವುದಾಗಿ ವರದಿ ಮಾಡಿದೆ.
ಕೆಲ ದಿನಗಳ ಹಿಂದೆ ನಡೆದ ಘಟನೆ ಈಗ ಹೊರಬಿದ್ದಿದೆ. ಇದರೊಂದಿಗೆ ಜಿಲ್ಲಾ ಪೊಲೀಸರು ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಖಾಲ್ತಂಕ ಪೊಲೀಸರು ದಾಳಿಕೋರರನ್ನು ಬಂಧಿಸುವ ಬದಲು ಯುವಕನನ್ನು ಜೈಲಿಗೆ ಹಾಕಿದರು. ಪೊಲೀಸ್ ಠಾಣೆ ಪ್ರಭಾರಿ ರಾಜೇಂದ್ರ ಸಿಂಗ್ ಬಾಗೇಲ್ ವಿರುದ್ಧ ತನಿಖೆ ಘೋಷಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್ ಮಾಹಿತಿ ನೀಡಿದ್ದಾರೆ. ದಾಳಿಕೋರರನ್ನು ಬಂಧಿಸುವ ಬದಲು ಯುವಕರನ್ನು ಜೈಲಿಗಟ್ಟಿದ ಘಟನೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.
A dalit man was brutally assaulted after he was accused of theft. The mob allegedly pulled down his pants to check his religion as the man kept shouting that he's a Hindu.https://t.co/jZCKWDyoMu pic.twitter.com/OkRLqu32eb — Alishan Jafri (@alishan_jafri) August 7, 2022
A dalit man was brutally assaulted after he was accused of theft. The mob allegedly pulled down his pants to check his religion as the man kept shouting that he's a Hindu.https://t.co/jZCKWDyoMu pic.twitter.com/OkRLqu32eb
— Alishan Jafri (@alishan_jafri) August 7, 2022
ಆದಿತ್ಯನ ತಾಯಿ ಭಗವತಿ ರೊಕ್ಡೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗ ಕಲ್ಘಾಟ್ನಲ್ಲಿ ಕೆಲಸಕ್ಕೆ ಹೋಗಿದ್ದು, ಮನೆಗೆ ಹಿಂದಿರುಗುತ್ತಿದ್ದಾಗ ತಂಡವೊಂದು ಆತನನ್ನು ತಡೆದು ಹಲ್ಲೆ ನಡೆಸಿದೆ ಎಂದು ತಿಳಿಸಿದ್ದಾರೆ. ಮಗನನ್ನು ಮುಸ್ಲಿಂ ಎಂದು ಪರೀಕ್ಷಿಸಲು ಬಟ್ಟೆ ಬಿಚ್ಚಿದ್ದಾರೆ ಎಂದು ದೂರಿದ್ದಾರೆ.
ಬಿಡುಗಡೆಯಾದ ವೀಡಿಯೋದಲ್ಲಿ ಯುವಕ ವಿವಸ್ತ್ರಗೊಳ್ಳುತ್ತಿರುವುದನ್ನು ಕಾಣಬಹುದು. ಹಿಂದೂ ಎಂದು ಹೇಳಿದರೂ ಗ್ಯಾಂಗ್ ದಾಳಿ ಮುಂದುವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.