ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) : ಕನ್ನಡಿಗರ ಜನಪರ ವೇದಿಕೆಯ ಮುಖಂಡ ಎಂಡಿ ಷರೀಫ್ ಯಾನೆ ಆಸೀಪ್ ಅವರನ್ನು ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ಬಂಧಿಸಲಾಗಿದ್ದು, ಆ. 26 ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ನಗರದ ಶಿವಪ್ಪ ನಾಯಕ ಬ್ಯಾರಿ ಮಾಲ್ ನಲ್ಲಿ ಸಾವರ್ಕರ್ ಭಾವ ಚಿತ್ರವನ್ನ ತೆಗೆಯುವಂತೆ ಆಕ್ಷೇಪಿಸಿ ಭಾವಚಿತ್ರವನ್ನ ತೆಗೆಸಿದ ಎಂಡಿ ಷರೀಫ್ ರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ದೂರು ದಾಖಲಾಗಿತ್ತು, ಈ ದೂರಿನಂತೆ ಅವರನ್ನು ಬಂಧಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.