ಜೆದ್ದಾ(www.vknews.in) : ತಾಯಿಫ್ ಇಂಡಿಯನ್ ಸೋಷಿಯಲ್ ಫಾರಂ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಅನಿವಾಸಿ ಭಾರತೀಯರ ಸಂಘಟನೆಯಾದ ಇಂಡಿಯನ್ ಸೋಶಿಯಲ್ ಫಾರಂ ಇದರ ತಾಯಿಫ್ ಘಟಕದ ವತಿಯಿಂದ 76ನೇ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಬಹಳ ಸಡಗರದಿಂದ ತಾಯಿಫ್ ನಲ್ಲಿ ಆಚರಿಸಲಾಯಿತು. ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಐಎಎಫ್ ತಾಯಿಫ್ ಘಟಕದ ಅಧ್ಯಕ್ಷರಾದ ಜನಾಬ್ ಸಾಜಿದ್ ಗಂಜಿಮಠ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನಾಬ್ ಸಂಶುದ್ದೀನ್ ತುಂಬೆ ಹಾಗೂ ಜಮೀಲ್ ಗುಲ್ಬರ್ಗ ಇವರು ಭಾಗವಹಿಸಿದ್ದರು.
ಮಲಿಕ್ ಇಡ್ಯ ಅತಿಥಿಗಳನ್ನು ಸ್ವಾಗತಿಸಿದರು.
ನಂತರ ಶಾಲಾ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಐಎಸ್ಎಫ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.