ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಯಾದವ್ ಸಮಾಜದ ಅಭಿವೃದ್ಧಿಗಾಗಿ 25 ಲಕ್ಷ ರೂಗಳ ನೆರವು ನೀಡಲು ಬದ್ದನಾಗಿದ್ದು ಮುಂಗಡವಾಗಿ ಹತ್ತು ಲಕ್ಷ ರೂಗಳ ಚೆಕ್ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಎಬಿಡಿ ಗ್ರೂಪಿನ ಅಧ್ಯಕ್ಷ ರಾಜೀವ್ ಗೌಡ ತಿಳಿಸಿದರು.
ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಶ್ರೀಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜಾ ಸೇವಾ ಕಾರ್ಯವನ್ನು ನೆರವೇರಿಸಿ ನಂತರ ಮಾತನಾಡಿದ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯಾದವ ಸಂಘದ ಮೂಲಕ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತಮ್ಮ ಸಂಸ್ಥೆಯ ಮೂಲಕ 25 ಲಕ್ಷ ರೂಗಳನ್ನು ನೀಡಲು ನಿರ್ಧರಿಸಿದೆ ಸಂಘದ ಪದಾಧಿಕಾರಿಗಳಿಗೆ 10 ಲಕ್ಷ ರೂಗಳ ಚೆಕ್ ನೀಡಿದ್ದೇನೆ ಮುಂದಿನ ದಿನಗಳಲ್ಲಿ 15 ಲಕ್ಷ ರೂಗಳನ್ನು ನೀಡುವುದಾಗಿ ರಾಜೀವ್ಗೌಡ ಭರವಸೆ ನೀಡಿದರು.
ಕ್ಷೇತ್ರದಲ್ಲಿ ಯಾದವ ಸಮಾಜದ ಅಭಿವೃದ್ಧಿಗಾಗಿ ತನ್ಮೂಲಕ ಎಲ್ಲಾ ರೀತಿಯ ನೆರವು ನೀಡಲು ಬದ್ದನಾಗಿದ್ದು ಈ ವರ್ಷದಂತೆ ಪ್ರತಿ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುವಂತಾಗಲಿ ಎಂದು ಶುಭ ಹಾರೈಸಿ ಶ್ರೀಕೃಷ್ಣ ದೇವರ ಕೃಪೆ ಎಲ್ಲಾ ಸಮಾಜದ ಮತ್ತು ವರ್ಗಗಳ ಮೇಲೆ ಇರಲಿ ಕ್ಷೇತ್ರದಲ್ಲಿ ರೈತಾಪಿ ವರ್ಗ ಮತ್ತು ಎಲ್ಲಾ ವರ್ಗಗಳ ಜನರು ಶಾಂತಿ-ನೆಮ್ಮದಿಯ ಜೊತೆಗೆ ಸಮೃಧ್ಧಿಯಿಂದ ಜೀವನ ನಡೆಸಲಿಯೆಂದು ಆ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯಾದವ ಸಂಘದ ಸಮಿತಿಯ ಅಧ್ಯಕ್ಷ ಕೆ.ಕೇಶವಮೂರ್ತಿ, ನಗರಸಭಾ ಸದಸ್ಯರಾದ ನಾರಾಯಣಸ್ವಾಮಿ, ಲಕ್ಷ್ಮಣ, ವಕೀಲ ಮುನಿರಾಜು, ನಗರಸಭೆಯ ಉಪಾಧ್ಯಕ್ಷ ಬಿ.ಅಫ್ಸರ್ಪಾಷ, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ, ನಗರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಅಬ್ದುಲ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.