ಉತ್ತರ ಪ್ರದೇಶ (ವಿಶ್ವ ಕನ್ನಡಿಗ ನ್ಯೂಸ್) : ಆಘಾತಕಾರಿ ಘಟನೆಯೊಂದರಲ್ಲಿ, ಕೆಲಸ ಕಳೆದುಕೊಂಡ ನೌಶಾದ್ ಎನ್ನುವ ವ್ಯಕ್ತಿ ಹೈ-ವೋಲ್ಟೇಜ್ ಲೈವ್ ವೈರ್ಗಳಲ್ಲಿ ಸ್ಟಂಟ್ ಮಾಡಿಕೊಂಡು ಎತ್ತರಕ್ಕೆ ಏರಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಅಮರಿಯಾ ಪಟ್ಟಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಕ್ಲಿಪ್ನಲ್ಲಿ, ಆ ವ್ಯಕ್ತಿ ಲೈವ್ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಮೇಲಕ್ಕೆ ಏರುತ್ತಿರುವುದನ್ನು ಕಂಡು ಆತಂಕಗೊಂಡ ವೀಕ್ಷಕರು ಭಯಭೀತರಾಗಿ ದೃಶ್ಯವನ್ನು ವೀಕ್ಷಿಸಿದರು. ಕೆಲವು ಜನರು ಅಂಗಡಿಯ ಮೇಲ್ಛಾವಣಿಯನ್ನು ಹತ್ತಿ ಆ ವ್ಯಕ್ತಿಯನ್ನು ತಲುಪುತ್ತಿರುವುದನ್ನು ಸಹ ಕಾಣಬಹುದು. ಮಳೆಯಿಂದಾಗಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನೌಶಾದ್ಗೆ ವಿದ್ಯುತ್ ಶಾಕ್ ತಗುಲದೇ ಇರಬಹುದೆಂದು ಅಂದಾಜಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.