ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ತೊಕ್ಕೊಟ್ಟು ನಿವಾಸಿ ಝಾಕೀರ್(36) ಎಂಬ ಯುವಕನ ಮೃತದೇಹವು ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಂತ ಸ್ವಭಾವದ ಮೂಲಕ ಪರಿಸರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಝಾಕೀರ್, ಮೀನು ವ್ಯಾಪಾರಿಯಾಗಿದ್ದರು. ಕಳೆದ ತಿಂಗಳು 26 ರಂದು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ಹಿಂದಿರುಗಿ ಬಂದಿರಲಿಲ್ಲ. ಮೊಬೈಲ್ ರಿಂಗ್ ಆಗಿ ಸ್ವಿಚ್ಛ್ ಆಫ್ ಆಗುತ್ತಿತ್ತು. ಮೃತರಿಗೆ ಪತ್ನಿ, ಏಳು ವರ್ಷದ ಮಗ ಇದ್ದು, ಪತ್ನಿ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ವಾರದ ಹಿಂದೆಯೇ ಮಂಜೇಶ್ವರ ಸಮುದ್ರದಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಅಪರಿಚಿತ ಶವವಾಗಿದ್ದ ಕಾರಣ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಕೆಲವು ದಿನ ಇಟ್ಟು, ಬಳಿಕ ಪೋಷಕರು ಬಾರದ ಹಿನ್ನೆಲೆಯಲ್ಲಿ ಸಮೀಪದ ಮಸೀದಿಯಲ್ಲಿ ದಫನ ಮಾಡಲಾಗಿತ್ತು.
ಝಾಕೀರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ, ಇದೊಂದು ಕೊಲೆಯಾಗಿದೆ. ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಆತನ ಮೊಬೈಲ್ ಲೋಕೇಶನ್ ಸೋಮೇಶ್ವರ ಹಾಗೂ ಮೊನ್ನೆ ಸಂಜೆ 6:15ರವರೆಗೆ ಪಂಡಿತೌಸ್ ತೋರಿಸಿ ನಂತರ ಸ್ವಿಚ್ಛ್ ಆಫ್ ಆಗಿದೆ. ಈ ಮೊಬೈಲ್ ಯಾರಲ್ಲಿದೆ ಎನ್ನುವುದು ಗೊತ್ತಾದರೆ ಸಾವಿಗೆ ಕಾರಣವೂ ಗೊತ್ತಾಗಲಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಉಳ್ಳಾಲ ಠಾಣಾಧಿಕಾರಿಯಲ್ಲಿ ಮನವಿ ಮಾಡಿದ್ದು, ಸಿಸಿ ಕೆಮರಾ ಫೂಟೇಜ್ಗಳನ್ನೂ ನೀಡಲಾಗಿದೆ. ಮೃತದೇಹವನ್ನು ಚೆಂಬುಗುಡ್ಡೆಗೆ ತಂದು ಮರು ದಫನ ಮಾಡಲಾಗುವುದು ಎಂದು ಎಂದು ಮೃತರ ಸಹೋದರ ಅಶ್ರಫ್ ಹರೇಕಳ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.