(www.vknews.in) : ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಗಾಂಧೀನಗರದಲ್ಲಿ ಸಾಧಾರಣ 50 ವರ್ಷದಷ್ಟು ಹಳೆಯದಾದ ಕಟ್ಟಡದಲ್ಲಿ ಕಳೆದ 5 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹೋಟೆಲ್ ಸಿ.ಎಂ ಫ್ಯಾಮಿಲಿ ರೆಸ್ಟೋರೆಂಟ್ ಇಂದು ವಿಶಾಲವಾದ ಸ್ಥಳವಾಕಾಶದೊಂದಿಗೆ ಗ್ರಾಹಕರ ಸೇವೆಗೆ ಮುಕ್ತವಾಗಿದೆ.
ಮಂಗಳೂರು ಮತ್ತು ಕೇರಳಿಗರ ನೆಚ್ಚಿನ ಉಪಹಾರ ಕೇಂದ್ರವಾಗಿ ಗುರುತಿಸಿಕೊಂಡ ಹೋಟೆಲ್ ಸಿ.ಎಂ ಹೆಚ್ಚಿನ ಸೌಕರ್ಯಕ್ಕಾಗಿ ಎರಡನೇ ಅಂತಸ್ತಿಗೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಮಂಗಳೂರು ಮತ್ತು ಕೇರಳ ಮಾದರಿಯ ಆಹಾರವನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ಹೋಟೆಲ್ ಸಿ.ಎಂ ನವೀಕರಮಗೊಂಡು ಎಲ್ಲಾ ರೀತಿಯ ತಂಪು ಪಾನೀಯಗಳು ಮತ್ತು ಚೈನೀಸ್ ಆಹಾರವನ್ನು ನುರಿತ ಅಡುಗೆದಾರರಿಂದ ತಯಾರಿಸಿ ಗ್ರಾಹಕರಿಗೆ ನೀಡುತ್ತಿದೆ.
ಕೇವಲ ಎರಡು ತಿಂಗಳ ಅವಧಿಯಲ್ಲಿ ಮಂಗಳೂರಿನ Spacerway Design Hub interior & Exterior ಸಂಸ್ಥೆಯು ನವೀಕರಣವನ್ನು ನಡೆಸಿಕೊಟ್ಟಿದೆ. 50 ವರ್ಷದಷ್ಟು ಹಳೆಯದಾದ ಕಟ್ಟಡದಲ್ಲಿ ಕಂಗೊಳಿಸುತ್ತಿರುವ ಈ ಹೋಟೆಲ್ ವಿನ್ಯಾಸವು ಹಲವು ಲಕ್ಸೂರಿ ಹೋಟೆಲ್ ಗಳನ್ನು ಮೀರಿಸುವಂತಿದೆ. ವಿಶಾಲವಾದ ಉಪಹಾರ ವ್ಯವಸ್ಥೆ, ಜ್ಯೂಸ್ ಕೌಂಟರ್ ಮತ್ತು ಚೈನೀಸ್ ಅಡುಗೆ ವ್ಯವಸ್ಥೆ, PVC Laminate ಮಾಡಿದ ಪೀಠೋಪಕರಣಗಳು, ಗ್ರಾಹಕರ ಅನುಕೂಲಕ್ಕಾಗಿ 40 ಡೆನ್ಸಿಟಿ ಸೋಫಾ ಸೆಟ್ ಮತ್ತು ವಿಶೇಷ ವಿನ್ಯಾಸದಲ್ಲಿ ಮೂಡಿ ಬಂದ ಎರಡನೇ ಅಂತಸ್ತಿಗೆ ಹೋಗುವ ಮೆಟ್ಟಿಲು ಮತ್ತು ಕೈಗಂಬಿ (Handrailing) ಗ್ರಾಹಕರನ್ನು ಇನ್ನಷ್ಟು ಆಕರ್ಷೀಸುವಂತಿದೆ.
ಎರಡನೇ ಅಂತಸ್ತಿನ ಗೋಡೆಗಳಲ್ಲಿ WPC Louvers, CNC ವಿನ್ಯಾಸಗಳು ಹಾಗೂ ಕೃತಕ ಗಾರ್ಡೆನ್ ಹೊಸ ಮೆರುಗನ್ನು ಕಂಡುಕೊಂಡಿದೆ. ಫ್ಯಾಮಿಲಿಗಾಗಿ ವ್ಯವಸ್ಥೆಯನ್ನು ಸಜ್ಜುಗೊಳಿಸಿರುವ ಎರಡನೇ ಅಂತಸ್ತು ವಿಶಾಲವಾದ ಆಸನ ವ್ಯವಸ್ಥೆ ಹೊಂದಿದೆ.
ಹತ್ತು ವರ್ಷಗಳ ದುಬೈ ಅನುಭವ ಹೊಂದಿದ ನುರಿತ ವಿನ್ಯಾಸಗಾರರನ್ನು ಹೊಂದಿದ Spacerway Design Hub ಹೊಸ ಮಾದರಿಯ ವಿನ್ಯಾಸಗಳನ್ನು ಮಾರ್ಕೆಟ್ ಗೆ ಬಿಡುಗಡೆಗೊಳಿಸಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಇಂಜಿನಿಯರ್ಸ್ ಗಳಿಗೆ ಅರೇಬಿಕ್ ಮಾಡಲ್, ಲಕ್ಸೂರಿ ಸೆಮಿ ಲಕ್ಸೂರಿ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ ವಿನ್ಯಾಸಗಳನ್ನು ನೀಡಿ ಹೊಸ ಜಗತ್ತನ್ನು ಪರಿಚಯಿಸಿ ಕೊಡುತ್ತಿದೆ.
ವೀಡಿಯೋ ನೋಡಿ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Spacerway Design Hub Total Solution to your need
Architecture Interior | Exterior | Engineers Crystal Plaza 1st Floor Kaikamba Mangalore 574219 +916362536299
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.