(www.vknews.in) : ಹಲವಾರು ವರ್ಷಗಳಿಂದ ಮಾಡನ್ನೂರು ಪರಿಸರದಲ್ಲಿ ಕಾರುಣ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ “ಬ್ಲೂ ಸ್ಟಾರ್ ಮಾಡನ್ನೂರ್” ಸಂಘದ ನೂತನ ಸಮಿತಿಯನ್ನು ಇತ್ತೀಚೆಗೆ ಹಿರಿಯ ಸದಸ್ಯರುಗಳ ಅಭಿಪ್ರಾಯದಂತೆ ರಚಿಸಲಾಯಿತು.
“ಬ್ಲೂ ಸ್ಟಾರ್ ಮಾಡನ್ನೂರ್” ಇದರ ಅಧ್ಯಕ್ಷರಾಗಿ ಮೊಯಿದು ಎಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಎಂ.ಎ ಹಾಗು ಕೋಶಾಧಿಕಾರಿಯಾಗಿ ಯೂಸುಫ್ ಎ.ಜಿ ಅವರನ್ನು ನೇಮಿಸಲಾಯಿತು. ಹಿರಿಯ ಸದಸ್ಯರುಗಳಾದ ಕೆ.ಕೆ ಇಬ್ರಾಹಿಂ ಹಾಜಿ, ಹುಸೈನ್ ಭಾಗ್ತಿಮಾರ್, ಹಬೀಬ್ ನೂರಿ ಇವರುಗಳ ಮೇಲ್ನೋಟದಲ್ಲಿ ಎಲ್ಲರ ಅಭಿಪ್ರಾಯದಂತೆ ಹೊಸ ಸಮಿತಿಗೆ ಚಾಲನೆ ನೀಡಲಾಯಿತು.
ಬ್ಲೂ ಸ್ಟಾರ್ ಕ್ರಿಕೆಟರ್ಸ್ ಮಾಡನ್ನೂರ್ ತಂಡದ ಸಕ್ರಿಯ ಸದಸ್ಯರುಗಳಾದ ಮುಸ್ತಫ ಹಾಜಿ ಪುಷ್ಪಕ್, ಖಾದರ್ ನಡುವಡ್ಕ, ನದೀಮ್ ಕೆ.ಕೆ, ಜಾಬಿರ್ ದುಬೈ, ಅಸ್ಲಮ್ ನಡುವಡ್ಕ, ಅಶ್ರಫ್ ಸಾರಕರೆ ಹಾಗು ಎಲ್ಲಾ ಸದಸ್ಯರುಗಳ ಒಮ್ಮತದಲ್ಲಿ “ಬ್ಲೂ ಸ್ಟಾರ್ ಹೆಲ್ಪ್ ಲೈನ್ ಮಾಡನ್ನೂರ್” ಸಮಿತಿಯು ರಚನೆಗೊಂಡಿದ್ದು, ಮಾಡನ್ನೂರ್ ಜಮಾಅತ್ ಸುತ್ತಮುತ್ತಲಿನ ಪರಿಸರದಲ್ಲಿ “ಬ್ಲೂ ಸ್ಟಾರ್ ಹೆಲ್ಪ್ ಲೈನ್” ಕಾರುಣ್ಯ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.