ಜಕಾರ್ತ (ವಿಶ್ವ ಕನ್ನಡಿಗ ನ್ಯೂಸ್) : ಇಂಡೋನೇಷ್ಯಾದ ಉತ್ತರ ಜಕಾರ್ತದಲ್ಲಿರುವ ಜುಮುವಾ ಮಸೀದಿಯ ಬೃಹತ್ ಗುಮ್ಮಟವೊಂದು ನವೀಕರಣ ಕಾರ್ಯದ ವೇಳೆ ಬೆಂಕಿಗೆ ಆಹುತಿಯಾಗಿದೆ. ಈ ಮಸೀದಿಯು ಜಕಾರ್ತಾ ಇಸ್ಲಾಮಿಕ್ ಸೆಂಟರ್ ನ ಕಟ್ಟಡ ಸಂಕೀರ್ಣದಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ, ಗುಮ್ಮಟವು ಬೆಂಕಿಯಲ್ಲಿ ಕುಸಿಯುತ್ತಿರುವುದನ್ನು ಕಾಣಬಹುದು. ದೃಶ್ಯದಲ್ಲಿ ಸ್ಥಳದಿಂದ ಭಾರಿ ಹೊಗೆ ಏಳುವುದನ್ನು ಸಹ ತೋರಿಸುತ್ತವೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಮಸೀದಿಯನ್ನು ನವೀಕರಿಸುವ ಜವಾಬ್ದಾರಿಯನ್ನು ಹೊತ್ತಿರುವ ಕಂಪನಿಯ ನಾಲ್ವರು ಉದ್ಯೋಗಿಗಳನ್ನು ಪ್ರಶ್ನಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
WATCH 🚨 Huge dome of the Jakarta Islamic Centre Grand Mosque in Indonesia collapses following a major fire pic.twitter.com/916ecPbgAa — Insider Paper (@TheInsiderPaper) October 19, 2022
WATCH 🚨 Huge dome of the Jakarta Islamic Centre Grand Mosque in Indonesia collapses following a major fire pic.twitter.com/916ecPbgAa
— Insider Paper (@TheInsiderPaper) October 19, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.