ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ದೇಶದ ಪ್ರಸಿದ್ಧ ಇಸ್ಲಾಮಿಕ್ ಧಾರ್ಮಿಕ ಅಧ್ಯಯನ ಕೇಂದ್ರ ದಾರುಲ್ ಉಲೂಮ್ ಅನ್ನು ಅಕ್ರಮ ಮದರಸಾ ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ದೇವಬಂದ್ನಲ್ಲಿರುವ ದಾರುಲ್ ಉಲೂಮ್, ಸಹರಾನ್ಪುರ ಜಿಲ್ಲಾಡಳಿತ ಬಿಡುಗಡೆ ಮಾಡಿದ 307 ಅಕ್ರಮ ಮದರಸಾಗಳಲ್ಲಿ ಒಂದಾಗಿದೆ. ಯುಪಿ ಆಡಳಿತದ ಅಡಿಯಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಸಹರಾನ್ಪುರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಭರತ್ಲಾಲ್ ಗೊಂಡ್ ಪ್ರತಿಕ್ರಿಯಿಸಿ, ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ 307 ಮದರಸಾಗಳ ವರದಿಯನ್ನು ಆಡಳಿತಕ್ಕೆ ಕಳುಹಿಸಲಾಗಿದೆ. ದಾರುಲ್ ಉಲೂಮ್ ಕೂಡ ಅಕ್ರಮ ಸಂಸ್ಥೆ. ಸಂಸ್ಥೆಗೆ ನೀಡಲಾಗಿದ್ದ ಸ್ಕಾಲರ್ಶಿಪ್ ಮತ್ತು ಇತರ ಯೋಜನೆಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರವೇ ಸಮೀಕ್ಷೆ ನಡೆಸಲಾಗಿದೆ ಎಂದೂ ಅವರು ಬಹಿರಂಗಪಡಿಸಿದ್ದಾರೆ. ಸ್ಥಾಪನೆಯ ವರ್ಷ, ವ್ಯವಸ್ಥಾಪಕ ಸಮಾಜ, ಹೆಸರು ಮತ್ತು ಆದಾಯದ ಮೂಲವು ವಿಚಾರಣೆಯ ಭಾಗವಾಗಿದೆ. ಜಿಲ್ಲಾಡಳಿತ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರತಲಾಲ್ ಗೊಂಡ್ ತಿಳಿಸಿದರು. ಕಳೆದ ತಿಂಗಳು, ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳ ಸಮೀಕ್ಷೆ ತೆಗೆದುಕೊಳ್ಳುವುದಾಗಿ ಘೋಷಿಸಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.