(www.vknews.in) : ಕಾಣಿಯೂರಿನಲ್ಲಿ ಅಮಾಯಕ ಜವಳಿ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಪುತ್ತೂರು ವಲಯ ಜಂಇಯತುಲ್ ಖುತಬಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದ್ದು, ಈ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ 28 ನೇ ತಾರೀಕಿನಂದು ನಡೆಸುವ ಕಾಲ್ನಡಿಗೆ ಜಾಥಾ ಮತ್ತು ಖಂಡನಾ ಸಭೆಗೆ ಸಂಪೂರ್ಣವಾದ ಬೆಂಬಲವನ್ನು ನೀಡುತ್ತದೆ.
ಸಂತ್ರಸ್ತರಿಗೆ ಸರಿಯಾದ ನ್ಯಾಯ ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವ ನಿಟ್ಟಿನಲ್ಲಿ ಸಂಭಂದಪಟ್ಟ ಪೋಲಿಸ್ ಅಧಿಕಾರಿಗಳು ಗಮನ ಹರಿಸಬೇಕೆಂದು ಮತ್ತು ಸಮಾಜದ ಶಾಂತಿ ಸಾಮರಸ್ಯಕ್ಕೆ ದಕ್ಕೆಯಾಗದಂತೆ ಬೇಕಾದ ಕ್ರಮ ಜರಗಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ
ಕಾರ್ಯಕ್ರಮ ವಿವರಗಳು
ದಿನಾಂಕ: 28-10-2022 ಶುಕ್ರವಾರ ಸ್ಥಳ: ದರ್ಬೆ ವೃತ್ತದಿಂದ ಎಸಿ ಕಛೇರಿ ವರೆಗೆ ಕಾಲ್ನಡಿಗೆ ಜಾಥಾ ಮತ್ತು ಸಭೆ ಸಮಯ: 3 ಗಂಟೆಗೆ ರ್ಯಾಲಿ ಆರಂಭ
ಪುತ್ತೂರು ವಲಯ ವ್ಯಾಪ್ತಿಯ ಎಲ್ಲಾ ಮಸೀದಿಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡಿ ವಿಜಯಗೊಳಿಸಬೇಕಾಗಿ ವಿನಂತಿ.
ಸಯ್ಯಿದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ (ಅಧ್ಯಕ್ಷರು) ನಝೀರ್ ಅಝ್ಹರಿ ಬೊಳ್ಮಿನಾರ್ (ಕಾರ್ಯದರ್ಶಿ) SKJQ ಪುತ್ತೂರು ವಲಯ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.