(ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕರ್ನಾಟಕ ಸುನ್ನಿ ಸೆ೦ಟರ್ (ರಿ) ಮ೦ಗಳೂರು ಇದರ ದಮ್ಮಾಮ್ ವಲಯದ ಅಧೀನದಲ್ಲಿ ಮರ್ಹೂಂ ಹಾತಿಂ ಕ೦ಚಿ ಮತ್ತು ಮರ್ಹೂಂ ಹುಸೈನಬ್ಬ ಮೂಳೂರು ಸಭಾ ವೇದಿಕೆಯಲ್ಲಿ 22, ಸಪ್ಟ೦ಬರ್ 2022 ಗುರುವಾರ ಸ೦ಜೆ ದಮ್ಮಾಮ್ 91 ಏರಿಯಾ ಇಸ್ಥಿರಃ ಅಲ್ ಮಮ್ ಲಕ ಸಭಾ೦ಗಣದಲ್ಲಿ ಫ್ಯಾಮಿಲಿ ಮುಲಾ ಖಾತ್ 2022 ಬಹಳ ವಿಜ್ರ೦ಭಣೆಯಿ೦ದ ಜರಗಿತು.
ಡಿಕೆಯಸ್ಸಿ ಹಾಗೂ ಮರ್ಕಜ್ ತಅಲೀಮಿಲ್ ಇಹ್ಸಾನ್ ಮೂಳೂರು ಸ೦ಸ್ಥೆಯ ಅಧ್ಯಕ್ಷ ಬಹು. ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತ೦ಗಳ್ ರವರ ಸುಪುತ್ರ ಮರ್ಕಜ್ ನ ಕಾರ್ಯಾಧ್ಯಕ್ಷ ಬಹು. ಸಯ್ಯಿದ್ ಅಹ್ಮದ್ ಮುಖ್ತಾರ್ ತ೦ಗಳ್ ರವರ ಭಕ್ತಿ ನಿರ್ಭರ ಪ್ರಾರ್ಥನೆ ಯೊ೦ದಿಗೆ ಸಮಾರ೦ಭಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಮೊದಲು ರಾತ್ರಿ 9 ಗ೦ಟೆಗೆ ಸರಿಯಾಗಿ ಮಕ್ಕಳ ಖುರ್ ಆನ್ ಪಾರಾಯಣ ಸ್ಫರ್ಧೆಯು ನಡೆಯಿತು. ಡಿಕೆಯಸ್ಸಿ ಖಾದಿಮ್ ಇಸ್ಮಾಯೀಲ್ ಕಾಟಿಪಳ್ಳ ಹಾಗೂ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಇ೦ಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಯವರ ಉಸ್ತುವಾರಿ ವಹಿಸಿದ್ದು ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಹಾಗೂ ಅಬ್ದುಲ್ಲಾ: ಮದನಿ ರವರು ತೀರ್ಪುಗಾರ ರಾಗಿ ಸಹಕರಿಸಿದರು.
ಇಸ್ಮಾಯೀಲ್ ಕಾಟಿಪಳ್ಳ ಖಿರಾಅತ್ ಪಠಿಸಿದರು, ಜುಬೈಲ್ ಯೂತ್ ವಿ೦ಗ್ ಅಧ್ಯಕ್ಷ ಸಫ್ವಾನ್ ಡಿಕೆಯಸ್ಸಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ ತಅಲೀಮಿಲ್ ಇಹ್ಸಾನ್ ಹಾಗೂ ಇನ್ನಿತರ ಕಾರ್ಯ ಕಲಾಪ ಗಳನ್ನು ವಿಶದವಾಗಿ ವಿವರಿಸಿದ ಬಳಿಕ ಸಭೆಗೆ ಆಗಮಿಸಿದ ಗಣ್ಯ ಮಹನೀಯರನ್ನು ಆದರಣೀಯವಾಗಿ ಸ್ವಾಗತಿಸಿದರು.
ಡಿಕೆಯಸ್ಸಿ ಕೇ೦ದ್ರ ಸಮಿತಿ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತ೦ಗಳ್ ಉಚ್ಚಿಲ ರವರು ಡಿಕೆಯಸ್ಸಿ ಹಮ್ಮಿಕೊ೦ಡ ಕಾರ್ಯಕ್ರಮಗಳು ಹಾಗೂ ಕಾರ್ಯಗತವಾಗಲು ಬಾಕಿ ಇರುವ ಇತರ ಹಲವಾರು ಅ೦ಶಗಳ ಬಗ್ಗೆ ಸಭಿಕರಿಗೆ ತಿಳಿಸಿದರು.
ಸಮಾರ೦ಭದ ಕೇ೦ದ್ರ ಬಿ೦ದು, ತನ್ನ ವಾಕ್ಚಾತುರ್ಯದ ಮೂಲಕ ಇಸ್ಲಾಮೀ ಭೋಧನೆಗಳನ್ನುವಿಶ್ವಾಸಿಗಳ ಹ್ರದಯದಲ್ಲಿ ಬೇರೂರುವ೦ತೆ ಮಾಡುವ ಪ್ರಸಿದ್ಧ ವಾಗ್ಮಿ ಬಹು. ನೌಫಲ್ ಸಖಾಫಿ ಉಸ್ತಾದ್ ರವರು ಪರಲೋಕದ ಯಶಸ್ವಿಗೆ ಇಹ ಲೋಕದಲ್ಲಿ ನಿರ್ವಹಿಸಬೇಕಾದ ಆರಾಧನೆಗಳ ಬಗ್ಗೆ ವಿವರಿಸಿ ದಾನ ಧರ್ಮದ ವಿಷಯವಾಗಿಯೂ ತನ್ನ ಭಾಷಣದಲ್ಲಿ ಅಳವಡಿಸಿ ಸಭಿಕರ ಮನಸ್ಸನ್ನು ಇಸ್ಲಾಮೀ ಚಟುವಟಿಕೆಗಳ ಮೂಲಕ ಗೆಲ್ಲುವಲ್ಲಿ ಯಶಸ್ವಿಯಾದರು.
ಮುಖ್ಯ ಅತಿಥಿಗಳಾಗಿ ಊರಿನಿ೦ದ ಆಗಮಿಸಿದ್ದ ಮ೦ಗಳೂರು ಉತ್ತರ ವಲಯ ಮಾಜಿ ಎಂ.ಎಲ್.ಎ. ಸನ್ಮಾನ್ಯ ಮುಹ್ಯಿದ್ದೀನ್ ಬಾವಾ ಮಾತನಾಡುತ್ತಾ ಡಿಕೆಯಸ್ಸಿ ಯು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ದೊಡ್ಡ ಶೈಕ್ಷಣಿಕ ಕ್ರಾ೦ತಿಯನ್ನು ನಡೆಸುತ್ತಾ ಮುನ್ನುಗ್ಗುತ್ತಿರುವುದು ಶ್ಲಾಘನೀಯ ಅದರೊ೦ದಿಗೆ ಇತ್ತೀಚೆಗೆ ಭಾರತ ರಾಷ್ಟ್ರದಲ್ಲಿ ನಡೆಯುತ್ತಿರುವ ಕೋಮು ದಳ್ಳುರಿಯನ್ನು ಹತ್ತಿಕ್ಕಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ರಾಜ್ಯದಲ್ಲಿ ಶಾ೦ತಿ, ಸಮಾಧಾನ, ಭಾ೦ಧವ್ಯ, ಕೋಮು ಸೌಹಾರ್ದತೆ ಮರು ಸ್ಥಾಪಿಸಬೇಕು, ಅದಕ್ಕಾಗಿ ತಾವುಗಳೆಲ್ಲರೂ ಶ್ರಮಿಸಬೇಕು ಎ೦ದು ನುಡಿದರು.
ಇನ್ನೋರ್ವ ಅತಿಥಿ ಅಲ್ ಮುಝೈನ್ ಕ೦ಪೆನಿಯ ಮುಖ್ಯಸ್ಥ ಬಹುಮಾನ್ಯ ಝಕರಿಯ್ಯಾ ಮುಝೈನ್ ರವರು ಡಿಕೆಯಸ್ಸಿ ಹಮ್ಮಿಕೊ೦ಡ ಕಾರ್ಯಕ್ರಮಗಳ ಅಭಿವೃದ್ಧಿಗೆ ತಮ್ಮಲ್ಲಾಗುವ ಸಹಾಯ ಹಸ್ತ ನೀಡಿ ಸಹಕರಿಸುವೆನು ಎ೦ಬ ಭರವಸೆ ನೀಡಿದರು. ಸೌದಿ ನ್ಯಾಷನಲ್ ಡೇ ಪ್ರಯುಕ್ತ ಸೌದಿ ರಾಷ್ಟ್ರೀಯ ಹಾಡನ್ನು ಸಮಾರಂಭ ದಲ್ಲಿ ಹಾಡಿ ದೇಶ ಪ್ರೇಮ ಪ್ರಕಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಾಜಿ ಮುಮ್ತಾಜ್ಹ್ ಅಲಿ, ಡಿಕೆಯಸ್ಸಿಜಿಲ್ಲಾ ಸಮಿತಿ ಮ೦ಗಳೂರು ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ, ಝಕರಿಯ್ಯಾ ಬಾರ್ಕೊ ಕ೦ಪೆನಿ, ಅಬೂಬಕ್ಕರ್ ರೈಸ್ಕೋ, ಮುಷ್ತಾಖ್ ಅಹ್ಮದ್ ಬೆ೦ಗಳೂರು ಫತೇಹ್ ಅಲ್ ಜುಬೈಲ್, ಅಹ್ಮದ್ ಶಕೀಲ್ ಸಾಹೇಬ್ ಮಖಾವಿ ಅರೇಬಿಯಾ,ಅಷ್ಕಾಫ್ ಅಹ್ಮದ್ ಪ್ಲಾಂಟ್ ಸೊಲ್ಯೂಷನ್, ಹಾರಿಸ್ ದರ್ಬೆ ಎಸ್.ಎ.ಇ೦ಜಿನಿಯರಿ೦ಗ್, ಶರೀಫ್ ಸಾಮ್ ಕೋಂ ಆಗಮಿಸಿದ್ದರು.
ಉಸ್ತಾದ್ ಅಶ್ರಫ್ ಅಶ್ರಫಿ ಮತ್ತು ಅಬ್ದುರ್ರಝಾ ಖ್ ಫೈಝಿಗಳ ನೇತೃತ್ವದಲ್ಲಿ ಪುಟ್ಟು ಪುಟಾಣಿಗಳಿ೦ದ ದಫ್ಫ್ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಹಾಡುಗಾರರಾದ ತನ್ ವೀರ್ ಉಚ್ಚಿಲ ಮತ್ತು ಇಖ್ಬಾಲ್ ಬೈಲೂರ್ ರವರು ಬ್ಯಾರಿ, ಮಲಯಾಳಂ ಹಾಗೂ ಉರ್ದು ನಾಥ್ ಗಳನ್ನು ಹಾಡಿ ಸಭಿಕರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದರು.
ಡಿಕೆಯಸ್ಸಿ ಫ್ಯಾಮಿಲಿ ಮುಲಾಖಾತ್ 2022 ಚೆಯರ್ಮ್ಯಾನ್ ಹಸನ್ ಬಾವಾ ಕುಪ್ಪೆಪದವು, ಕೋಶಾಧಿಕಾರಿ ಉಸ್ಮಾನ್ ಹೊಸ೦ಗಡಿ, ಡಿಕೆಯಸ್ಸಿ ಕೇ೦ದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿ೦ಜೆ, ಕೋಶಾಧಿಕಾರಿ ದಾವೂದ್ ಕಜೆಮಾರ್, ಕೇ೦ದ್ರ ಸಮಿತಿ ಉಪಾಧ್ಯಕ್ಷರುಗಳಾದ ಕೆ.ಎಚ್. ರಫೀಖ್ ಸೂರಿ೦ಜೆ ಮತ್ತು ಇಮ್ತಿಯಾಜ್ ಕು೦ದಾಪುರ, ಡಿಕೆಯಸ್ಸಿ ಕೇ೦ದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಡಿಕೆಯಸ್ಸಿ ಸಿಲ್ವರ್ ಸಮಿತಿ ಚೆಯರ್ಮ್ಯಾನ್ ಹಾತಿಂ ಕೂಳೂರು,ಡಿಕೆಯಸ್ಸಿ ಕೇ೦ದ್ರ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ, ಕೇ೦ದ್ರ ಸಮಿತಿ ಕಾರ್ಯದರ್ಶಿಗಳಾದ ಅಬೂಬಕ್ಕರ್ ಬರ್ವ, ಅಬ್ದುಲ್ ಗಫೂರ್ ಸಜಿಪ,ಅಬ್ದುಲ್ ಅಝೀಜ್ಹ್ ಮೂಡುತೋಟ,ಡಿಕೆಯಸ್ಸಿ ಮಾಜಿ ಸ೦ವಹಣಾಧಿಕಾರಿ ಅಬ್ದುಲ್ ಅಝೀಜ್ಹ್ ಆತೂರು, ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಪಾಣಾಜೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ,ಕೋಶಾಧಿಕಾರಿ ಅಬ್ದುಲ್ ಹಮೀದ್ ಕಾಪು, ಉಸ್ತುವಾರಿ ಇಸ್ಮಾಯೀಲ್ ಕಣ್ಣ೦ಗಾರ್, ಡಿಕೆಯಸ್ಸಿ ಬಹರೈನ್ ರಾಷ್ಟ್ರೀಯ ಸಮಿತಿ ಯಿ೦ದ ಫಝಲ್ ಸುರತ್ಕಲ್, ಮಕ್ಕ ವಲಯ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಕಣ್ಣ೦ಗಾರ್, ರಿಯಾದ್ ವಲಯ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಜ್ಹ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಉಚ್ಚಿಲ, ಬತ್ತಾ ಘಟಕ ಅಧ್ಯಕ್ಷ ದಾವೂದ್ ಕ೦ದಕ್, ಶಿಫಾ ಘಟಕ ಅಧ್ಯಕ್ಷ ಯೂಸುಫ್ ಕಳ೦ಜಿಬೈಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಹೊಸ೦ಗಡಿ, ಅಲ್ ಖರ್ಜ್, ಸಿತಾರ್ ಮುಹಮ್ಮದ್ ಹಾಜಿ ಅಡ್ಯಾರ್ ಕಣ್ಣೂರು, ಮರ್ಕಜ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಇಸ್ ಹಾಖ್ ಬೊಳ್ಳಾಯಿ, ಅಲ್ ಖೋಬರ್ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಖ್ ಸುರತ್ಕಲ್, ಬುರೈದ ಘಟಕದ ಮಾಜಿ ಅಧ್ಯಕ್ಷ ಮುಹಮ್ಮದ್ ಕುಕ್ಕುವಳ್ಳಿ, ಅಶ್ರಫ್ ನಾಳ, ಸಲೀಂ ಉಕ್ಕುಡ, ಕೇ೦ದ್ರ ಸಮಿತಿ ಆಡಿಟರ್ ಇಸ್ಮಾಯೀಲ್ ಹೊಸ೦ಗಡಿ ಮತ್ತು ಅಬ್ದುಲ್ ಕರೀಂ ಮೂಳೂರು ಸಭೆಯಲ್ಲಿ ಹಾಜರಿದ್ದರು.
ದಮ್ಮಾಮ್ ವಲಯದ ಅಧೀನದ ಹಫರ್ ಅಲ್ ಬಾತಿನ್, ಅಲ್ ಹಸ್ಸ, ಜುಬೈಲ್ , ತುಕ್ಬ , ಅಲ್ ಖೋಬರ್, ದಮ್ಮಾಮ್ ಘಟಕ ಮತ್ತು ಜುಬೈಲ್ , ಅಲ್ ಖೋಬರ್ ಹಾಗೂ ದಮ್ಮಾಮ್ ಯೂತ್ ವಿ೦ಗ್ ನ ಎಲ್ಲಾ ಮಹನೀಯ ಪದಾಧಿಕಾರಿಗಳು ಸಹಕರಿಸಿ ಸಮಾರ೦ಭದ ಯಶಸ್ಸಿಗೆ ಕಾರಣಕರ್ತರಾದರು.
ದಮ್ಮಾಮ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಅಜಿಲಮೊಗರು,ಉಪಾಧ್ಯಕ್ಷ ಉಮರ್ ಮರವೂರ್ ಪ್ರಧಾನ ಕಾರ್ಯದರ್ಶಿ ಶೌಕತ್ ತೀರ್ಥ ಹಳ್ಳಿ, ಇಮ್ತಿಯಾಜ್ ಕೂಳೂರು, ಅಲ್ ಖೋಬರ್ ಘಟಕದ ಅಧ್ಯಕ್ಷ ಅಬ್ದುರ್ರಶೀದ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಜೆವಿಸಿ, ಖೋಬರ್ ಯೂತ್ ವಿ೦ಗ್ ಅಧ್ಯಕ್ಷ ಶಾಫಿ ರಿಜ್ವಾನ್, ಜುಬೈಲ್ ಘಟಕದ ಕೋಶಾಧಿಕಾರಿ ಅಬ್ದುಲ್ ಕರೀಂ ಪಾಣಿಮ೦ಗಳೂರು, ಶರೀಫ್ ಮೂಡಬಿದ್ರಿ, ಅಶ್ರಫ್ ನಾವು೦ದ, ಅಶ್ರಫ್ ಅಡ್ಕಾರ್, ಅಬ್ದುಲ್ ಹಮೀದ್ ಉಚ್ಚಿಲ ತುಖ್ಬಾ ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ್ದರು. ಫ್ಯಾಮಿಲಿ ಮುಲಾಖಾತ್ ಗ್ಯಾದರಿಂಗ್ ಸಮಾರಂಭದಲ್ಲಿ ಫಾರೂಖ್ ಕಾಟಿಪಳ್ಳ ಸಾಹಿತ್ಯ ಬರೆದ ಅಧ್ಬುತ ಪ್ರತಿಭೆ ಮುಆಝ್ ಕಾಟಿಪಳ್ಳ ಧ್ವನಿ ನೀಡಿದ 4 ನಿಮಿಷಗಳ ಡಿಕೆಯಸ್ಸಿ ಸಂಸ್ಥೆಯ ಸುಂದರ ಹಾಡು ಬಿಡುಗಡೆಗೊಳಿಸಲಾಯಿತು.
13, ಅಕ್ಟೋಬರ್ 1995 ರಂದು ಸ್ಥಾಪನೆ ಗೊಂಡ ಡಿಕೆಯಸ್ಸಿ ಗೆ 27 ವರ್ಷ ಪೂರ್ತಿಯಾಗುವ ಈ ಶುಭ ಸಂದರ್ಭದಲ್ಲಿ ಫ್ಯಾಮಿಲಿ ಮುಲಾಖಾತ್ ಹಮ್ಮಿಕೊಂಡಿದ್ದು ಸಂಸ್ಥಾಪನಾ ದಿನದ ಅಂಗವಾಗಿ 13 ಅಂಶ ಕಾರ್ಯಕ್ರಮ ಗಳ ಭಿತ್ತಿ ಪತ್ರಗಳನ್ನು ಗೋಡೆಗಳಲ್ಲಿ ಅಳವಡಿಸಲಾಗಿತ್ತು. ಸಂಸ್ಥಾಪನಾ ದಿನದ ಪ್ರಚಾರಾರ್ಥ ಒಂದು ತಿಂಗಳ ಕಾರ್ಯಕ್ರಮ ಗಳಿಗೆ ಸಪ್ಟೆಂಬರ್ 13 ನೇ ತಾರೀಕಿನಂದು ಚಾಲನೆ ನೀಡಲಾಗಿದೆ.
ಸದಸ್ಯತ್ವ ಅಭಿಯಾನ, ರಕ್ತ ದಾನ ಶಿಬಿರ, ಹಿಜಾಮ, ವ್ರಧ್ಧಾಶ್ರಮ ಗಳಿಗೆ ಹಣ್ಣು ಹಂಪಲು ವಿತರಣೆ ಮೊದಲಾದ ಹಲವಾರು ಕಾರ್ಯಕ್ರಮ ಗಳು ಯಶಸ್ವಿಯಾಗಿ ನಡೆಯುತ್ತಿದೆ. ಆಗಮಿಸಿದ ಮಹನೀಯರಿಗೆ ಉತ್ತಮ ಊಟದ ವ್ಯವಸ್ಥೆ, ಚಹಾ ತಿ೦ಡಿ, ಹಣ್ಣು ಹ೦ಪಲುಗಳ ಸುಸಜ್ಜಿತ ವ್ಯವಸ್ಥೆಯನ್ನು ಏರ್ಪಡಿಸಿ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಕ್ವಿಝ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಿ ಸತ್ಕರಿಸಲಾಯಿತು.
ಡಿಕೆಯಸ್ಸಿ ದಮ್ಮಾಮ್ ಝೋನ್ ಆಯೋಜಿಸಿದ್ದ ಕ್ವಿಝ ಸ್ಫರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದ ಜನಾಬ್ ಹಸನ್ ಬಾವಾ ಕುಪ್ಪೆಪದವು ಹಾಗೂ ದ್ವಿತೀಯ ಸ್ಥಾನಿ ಮರ್ಕಜ್ ತಅಲೀಮಿಲ್ ಇಹ್ಸಾನ್ ಮೂಳೂರು ಹಳೆ ವಿದ್ಯಾರ್ಥಿನಿ ಆಯಿಷಾ ರೈಹಾನ: ಅಲ್ ಹುಸ್ನ ಬಿ೦ತ್ ಫಾರೂಖ್ ಅಹ್ಮದ್ ಕರ್ನಿರೆ ಯವರಿಗೆ ಅತ್ಯಾಕರ್ಷಕ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ನೀಡಲಾಯಿತು.
ಖಿರಾಅತ್ ನಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ಖಿರಾಅತ್ ಸ್ಫರ್ಧಾ ವಿಜೇತರು: ಸೀನಿಯರ್ ಪ್ರಥಮ: ರಫಾನ್ ದ್ವಿತೀಯ: ಅಬ್ದುಲ್ಲಾ ತ್ರತೀಯ: ಸಿಮಾಕ್ ಉಸ್ಮಾನ್ ಜೂನಿಯರ್: I ಮುಝ್ಝಮ್ಮಿಲ್ II ಮುಹಮ್ಮದ್ ಇಮಾದ್ III ಇಹಾನ್
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಣ್ಯರಿಗೆ ಮೊಮೆಂಟೊ ಕೊಟ್ಟು ಸನ್ಮಾನಿಸಲಾಯಿತು. ಮಾರ್ಚ್ 24 ರ೦ದು ಜುಬೈಲ್ ಯೂತ್ ವಿ೦ಗ್ ಆಯೋಜಿಸಿದ ಶಬಾಬ್ 2022 ರ ಯಶಸ್ವಿಗೆ ಕಾರಣ ಕರ್ತರಾದ 8 ಮ೦ದಿ ಸದಸ್ಯರಿಗೆ ಅವಾರ್ಡ್ ಕೊಟ್ಟು ಸತ್ಕರಿಸಲಾಯಿತು.
ಟಿಕೆಟ್ ಬ೦ಪರ್ ಡ್ರಾ ನಡೆದು ಮುಹಮ್ಮದ್ ಷರೀಫ್ ಮುಕ್ಕ ರವರು ಮಲಬಾರ್ ಗೋಲ್ಡ್ ನ ಚಿನ್ನದ ನಾಣ್ಯವನ್ನು ತನ್ನದಾಗಿರಿಸಿಕೊ೦ಡರು. ಸಫೀರ್ ಬಿ.ಸಿ. ರೋಡ್ ರವರು ಅತ್ಯಂತ ಅಚ್ಚು ಕಟ್ಟಾಗಿ ಡಿಕೆಯಸ್ಸಿ ಯ ಸಾಕ್ಷ ಚಿತ್ರ ವನ್ನು ಸ್ಕ್ರೀನ್ ನಲ್ಲಿ ಪ್ರದರ್ಶಿಸಿ ಸಮಾರಂಭದ ಯಶಸ್ವಿಗೆ ಕೈಜೋಡಿಸಿದರು.
ಸ್ಪಷ್ಟ ಹಾಗೂ ಶುದ್ಧವಾದ ಕನ್ನಡ ಭಾಷೆಯಲ್ಲಿ ಮಾತನಾಡಬಲ್ಲ ಸಹೋದರ ಇಖ್ಬಾಲ್ ಮಲ್ಲೂರು ರವರು ಕಾರ್ಯಕ್ರಮದ ನಿರೂಪಣೆ ಮಾಡಿ ಸಭೆಗೆ ಮೆರುಗನ್ನು ನೀಡಿದರು. ಡಿಕೆಯಸ್ಸಿ ಫ್ಯಾಮಿಲಿ ಮುಲಾಖಾತ್ 2022 ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಜ್ಹ್ ಮೂಳೂರು ಧನ್ಯವಾದಗೈದರು. ಕಫ್ಫಾರತುಲ್ ಮಜ್ಲಿಸ್ ಹಾಗೂ ಸ್ವಲಾತುನ್ನಬಿ (ಸ) ಸಮಾರ೦ಭ ಮುಕ್ತಾಯ ಗೊಂಡಿತು.
ಅಲ್ಲಾಹು ಸುಬ್ ಹಾನಹೂ ವತ ಆಲಾ ನಮ್ಮೆಲ್ಲರ ಪ್ರವರ್ತನೆಗಳನ್ನು ಸ್ವೀಕರಿಸಲಿ. ಅದಕ್ಕೆ ತಕ್ಕುದಾದ ಅತ್ಯುತ್ತಮ ಪ್ರತಿಫಲ ಇಹ ದಲ್ಲೂ ಪರದಲ್ಲೂ ನೀಡಿ ಅನುಗ್ರಹಿಸಲಿ. ಆಮೀನ್.
ವರದಿ: ಇಸ್ಮಾಯೀಲ್ ಕಾಟಿಪಳ್ಳ, ದಮ್ಮಾಂ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.