ಕಲಬುರಗಿ (ವಿಶ್ವ ಕನ್ನಡಿಗ ನ್ಯೂಸ್) : ಕಾ೦ಗ್ರೆಸ್ ತಲೆ, ಬುಡ ಇಲ್ಲದ ಪಕ್ಷ, ತಲೆ ಎ೦ದರೆ ಕೇಂದ್ರದಲ್ಲಿ ನಾಯಕತ್ವ ಇಲ್ಲ. ಬುಡ ಎ೦ದರೆ ತಳಮಟ್ಟದಲ್ಲಿ ಸಂಘಟನೆಯಿಲ್ಲ ಎ೦ದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವ್ಯ೦ಗ್ಯವಾಡಿದ್ದಾರೆ.
ನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ತಲೆ ಬುಡ ಇರುವ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎ೦ದರು. 70 ವರ್ಷಗಳ ಆಡಳಿತ ನಡೆಸಿದ ಕಾ೦ಗ್ರೆಸ್ ತಲೆ- ಬುಡವಿಲ್ಲದ೦ತಾಗಿರುವುದು ಅದರ ವಾಸ್ತವಿಕತೆಯನ್ನು ನಿರೂಪಿಸುತ್ತದೆ. ಆದ್ದರಿ೦ದ ಬಿಜೆಪಿ ಮತ್ತಷ್ಟು ಪ್ರಬಲಗೊಳ್ಳಲು ಹಿ೦ದುಳಿದ ವರ್ಗಗಳ ಶೇ70ರಷ್ಟು ಮತಗಳು ಬಿಜೆಪಿಗೆ ಬರಬೇಕಿದೆ. ನರೇ೦ದ್ರ ಮೋದಿಯವರ ವಿಶೇಷ ನಾಯಕತ್ವದ ಕಾರಣದಿಂದಾಗಿ ಅಭಿವೃದ್ಧಿಯಲ್ಲಿ, ಜಿಡಿಪಿಯಲ್ಲಿ ವಿಶ್ವದಲ್ಲಿ ಮುನ್ನುಗ್ಗುತ್ತಿರುವ ದೇಶ ಇದ್ರೆ ಅದು ಭಾರತ ಮಾತ್ರ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.