ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರ ವ್ಯಾಪ್ತಿಯ ಪ್ರೌಢಶಾಲಾ ಮಕ್ಕಳಿಂದ ಕರ್ನಾಟಕ ರಾಜ್ಯದ ಏಕೀಕರಣ ಮತ್ತು ನಾಡು ನುಡಿ ಕುರಿತು ಭಾಷಣ ಸ್ಪರ್ಧೆಯನ್ನು ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ 12 ಶಾಲೆಯ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು ಮೊದಲ ಬಹುಮಾನವನ್ನು ಪ್ರೆಸಿಡೆನ್ಸಿ ಪ್ರೌಢಶಾಲೆಯ ವರ್ಷ. ಎಮ್. ದ್ವಿತೀಯ ಬಹುಮಾನವನ್ನು ಸರ್ಕಾರಿ ಪ್ರೌಢಶಾಲೆಯ ರಶ್ಮಿ. ಎಸ್. ಮತ್ತು ತೃತೀಯ ಬಹುಮಾನವನ್ನು ಗುಡ್ ಶೆಫರ್ಡ್ ಶಾಲೆಯ ವರ್ಷಿಣಿ ಪಡೆದುಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಮಕ್ಕಳಿಗೆ ಕನ್ನಡ ಭಾಷಾ ಪ್ರೇಮ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಾಯಕ ಆಗುತ್ತವೆ ಹಾಗೂ ನಾಡು ನುಡಿ ಕುರಿತಂತೆ ಮಾಹಿತಿ ತಿಳಿಯುವಂತಾಗಲು ಭಾಷಣ ಸ್ಪರ್ಧೆಗಳಿಂದ ಪ್ರೇರೇಪಣೆ ಯಾಗುತ್ತದೆ ಇಂತಹ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿರುವುದು ಸಂತೋಷದಾಯಕ ಕನ್ನಡ ಭಾಷೆಯೊಂದಿಗೆ ಇತರೆ ಭಾಷೆಗಳನ್ನು ಮಕ್ಕಳು ಕಲಿಯುವುದರ ಮೂಲಕ ಬೌದ್ಧಿಕ ಶಕ್ತಿಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಸಂವಹನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ತಾಯಿ ಭಾಷೆಯನ್ನು ಪ್ರೀತಿಸಿ ,ಪ್ರೇರಿಪಿಸಿ ಅನ್ಯ ಭಾಷೆಗಳನ್ನು ಗೌರವಿಸುವುದು ಕನ್ನಡದ ಸಂಸ್ಕೃತಿಯಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಮಾಡಲು ಇಚ್ಚಿಸಿದ್ದು ನಾಡು ನುಡಿ ಕುರಿತಂತೆ ಅಭಿಮಾನ ಮೂಡುವಂತಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತವೆ. ಇದರೊಂದಿಗೆ ವೇದಿಕೆಗಳಲ್ಲಿ ಮಕ್ಕಳು ಧೈರ್ಯದಿಂದ ಮಾತನಾಡುವ ಸಾಮಥ್ರ್ಯ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಹಕಾರಿಯಾಗಿರುತ್ತವೆ ಪೋಷಕರು ಮತ್ತು ಶಿಕ್ಷಕ ವೃಂದದವರು ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಏಕೀಕರಣ ಕುರಿತು ಮಕ್ಕಳು ಅತ್ಯಂತ ಉತ್ತಮವಾಗಿ ಒಳ್ಳೆಯ ವಿಚಾರಗಳನ್ನು ಮಂಡಿಸಿದರು, ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ತತ್ತೂರು ಲೋಕೇಶಪ್ಪ ಅವರಿಂದ ನಾಡು ನುಡಿ ಕುರಿತ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಜಂಟಿ ಕಾರ್ಯದರ್ಶಿ ಪಿ . ಆರ್ ಸುನಿಲ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಮಳ್ಳೂರು ಹರೀಶ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಭಾಗವಹಿಸಿದ್ದರು, ತೀರ್ಪುಗಾರರಾಗಿ ಮಹಿಳಾ ಸಾಹಿತಿ ಸರಸಮ್ಮ ಮತ್ತು ಆವಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಅನುಪಮಾ ಅವರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಎನ್.ಅಮೃತಕುಮಾರ್, ಮಾಂತೇಶ್, ಮಂಜುನಾಥ್, ಸುಧಾ ವೆಂಕಟೇಶ್, ಗ.ನ ಆಶ್ವಥ್,ಡಿಎಂ ಶ್ರೀರಾಮ, ರವಿಕುಮಾರ್, ಸುಶೀಲಾ ಮಂಜುನಾಥ್, ಲತಾ ರಾಮಮೋಹನ್, ನಳಿನಾಕ್ಷಿ, ನಾಗಮಣಿ, ಕಾವ್ಯ ,ಅಣ್ಣಮ್ಮ, ಪ್ರೇಮ ಲೀಲಾ, ವೆಂಕಟೇಶ್,ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.