ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ಹಸಿರು ನಿಶಾನೆ ತೋರಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ದೇಶದ ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ ಮತ್ತು ಮೈಸೂರು ನಡುವೆ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ನವೆಂಬರ್ 5ರಂದು ಈ ಸೆಮಿ ಹೈಸ್ಪೀಡ್ ರೈಲು ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಿಂದ ಪರೀಕ್ಷೆಗಾಗಿ ಹೊರಡಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ವಿಶ್ವದರ್ಜೆಯ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿರುವ ದೇಶದ ಮೊದಲ ಸೆಮಿ-ಹೈಸ್ಪೀಡ್ ರೈಲು. ಇದು ಪ್ರಯಾಣದ ಸಮಯವನ್ನು 25% ರಿಂದ 45% ರಷ್ಟು ಕಡಿಮೆ ಮಾಡುತ್ತದೆ. ಈ ರೈಲು 52 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪಬಹುದು. ಎಲ್ಲಾ ವಂದೇ ಭಾರತ್ ಬೋಗಿಗಳಲ್ಲಿ ಓಟೋಟಿಕ್ ಬಾಗಿಲುಗಳನ್ನು ಅಳವಡಿಸಲಾಗಿದೆ. ಜಿಪಿಎಸ್-ಆಧಾರಿತ ಆಡಿಯೊ-ವಿಶುವಲ್ ಪ್ಯಾಸೆಂಜರ್ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್ ಸ್ಪಾಟ್ ವೈ-ಫೈ, ಮತ್ತು ತುಂಬಾ ಆರಾಮದಾಯಕ ಆಸನ. ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ತಿರುಗುವ ಕುರ್ಚಿಗಳು ಸಹ ವಿಶೇಷಗಳಾಗಿವೆ.
ರೈಲಿನಲ್ಲಿನ ಶೌಚಾಲಯಗಳು ಜೈವಿಕ ನಿರ್ವಾತ ರೀತಿಯವು. ಎಲ್ಲಾ ಬೋಗಿಗಳು ಬಿಸಿ ಆಹಾರ ಮತ್ತು ಬಿಸಿ ಮತ್ತು ತಂಪು ಪಾನೀಯಗಳನ್ನು ನೀಡುವ ಸೌಲಭ್ಯಗಳನ್ನು ಹೊಂದಿವೆ.
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.