(www.vknews.in) ಪುತ್ತೂರು:- ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರು ಆಕ್ಸಿಜನ್ ಮ್ಯಾನ್ ಖ್ಯಾತಿಯ ಹೆಮ್ಮೆಯ ಕನ್ನಡಿಗ ಬಿ.ವಿ.ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಪುತ್ತೂರಿನ ಪ್ರಜ್ಞಾ ಆಶ್ರಮ ಬಿರುಮಲೆ ಬೆಟ್ಟದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾವು ಹೇಮನಾಥ್ ಶೆಟ್ಟಿಯವರು ಭಾರತ ದೇಶದಲ್ಲಿ ಮಹಾಮಾರಿ ಕರೋನ ರೋಗವು ಬಂದಂತಹ ಸಮಯದಲ್ಲಿ ಆಕ್ಸಿಜನ್ ನೀಡುವ ಮೂಲಕ ದೇಶದ ಬಡಜನತೆಗೆ ಹಾಗೂ ಜನಸಾಮಾನ್ಯರಿಗೆ ಬಿ.ವಿ.ಶ್ರೀನಿವಾಸ್ ಅವರು ನೆರವಾಗಿದ್ದಾರೆ ಎಂದು ನುಡಿದರು. ಇಡೀ ಜಗತ್ತಿನಲ್ಲಿ ಕರೋನ ಎಂಬ ಮಾಹಾಮಾರಿ ರೋಗವು ಅಪ್ಪಳಿಸಿದ ಸಂದರ್ಭದಲ್ಲಿ ತನ್ನ ಜೀವದ ಹಂಗು ತೊರೆದು ದೇಶದ ಜನಸಾಮಾನ್ಯರಿಗೆ ಆಕ್ಸಿಜನ್ ನೀಡಿದ ಕಿರ್ತೀ ಶ್ರೀನಿವಾಸ್ ಅವರಿಗೆ ಸಲ್ಲಬೇಕು ಎಂದರು
ಕಾರ್ಯಕ್ರಮದಲ್ಲಿ, ಕಾರ್ಯಕ್ರಮದ ಸಂಘಟಕರು ಎನ್.ಎಸ್.ಯು.ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಫಾರೋಕ್ ಬಾಯಾಬೆ, ಪುತ್ತೂರು ಬ್ಲಾಕ್ ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಗ್ರಾಮ ಪಂಚಾಯತಿ ಸದಸ್ಯರಾದ ಕಮಲೇಶ್ ಸರ್ವದೋಳಗುತ್ತು ಮಾತನಾಡಿದರು. ಈ ಸಂದರ್ಭದಲ್ಲಿ ಕೆಸಿ ಅಶೋಕ್ ಶೆಟ್ಟಿ, ರಾಘವ ಪೂಜಾರಿ ಮುಡ್ಪುನಡ್ಕ ,ರವಿಪ್ರಸಾದ್ ಶೆಟ್ಟಿ ಬನ್ನೂರು, ಎಂಬಿ ಇಸ್ಮಾಯಿಲ್ ಬಲ್ನಾಡ್, ಬಾಬು ಸಂಪ್ಯ , ಕೇಶವ ಬೆದ್ರಾಳ, ಡಿಕೆ ಅಬ್ದುಲ್ ರಹಿಮಾನ್, ಕೆದಿಲ ಗ್ರಾಮ ಪಂಚಾಯತಿ ಸದಸ್ಯರಾದ ಉನೈಸ್ ಗಡಿಯಾರ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ರಶೀದ್ ಮುರ, ಸಿಯಾನ್ ದರ್ಬೆ, ಪುತ್ತೂರು ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್,ಜಲೀಲ್ ಬಲ್ನಾಡ್, ನವಾಝ್ ಬಲ್ನಾಡ್, ರಾಜೇಶ್, ದಿನೇಶ್, ಸಾಮಾಜಿಕ ಜಾಲತಾಣದ ಶಾನಾವಾಝ್ , ಸೈಯ್ಯದ್ ಕಬಕ , ವಿಶ್ವನಾಥ್ ಪೂಜಾರಿ, ಇತರರು ಉಪಸ್ಥಿತರಿದ್ದರು. ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಇಸಾಖ್ ಸಾಲ್ಮರ ಅವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ವಿಚಾರಗಳನ್ನು ಮಂಡಿಸಿದರು. ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.