ಉಡುಪಿ (ವಿಶ್ವ ಕನ್ನಡಿಗ ನ್ಯೂಸ್) : ಪಡುತೋನ್ಸೆ ಗ್ರಾಮದ ಹೊಡೆ ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ಮನೆಯಿಂದ ಕೆಲಸದ ಆಫೀಸಿಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಹೊಡೆ ನಿವಾಸಿ ಜುಬೇರ್ ಎಂಬವರ ಪತ್ನಿ 32 ವರ್ಷದ ಅನ್ಸಿಯಾ ಹಾಗೂ ಒಂದು ವರ್ಷದ ಹೆಣ್ಣು ಮಗು ಅಜೀನ್ ನಾಪತ್ತೆಯಾದವರಾಗಿದ್ದರೆ.
ನವೆಂಬರ್ 7ರಂದು ಬೆಳಿಗ್ಗೆ 10ಗಂಟೆಗೆ ಅನ್ಸಿಯಾ ಅವರು ತನ್ನ ಮಗುವಿನೊಂದಿಗೆ ತಾನು ಕೆಲಸ ಮಾಡುತ್ತಿದ್ದ ಹೈರಿಚ್ ಆಫೀಸ್ ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಸಂಜೆ 5 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ. ಬಳಿಕ ಪತಿ ಜುಬೇರ್ ಅವರು ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದರೂ ಈವರೆಗೂ ಪತ್ನಿ ಹಾಗೂ ಮಗವಿನ ಸುಳಿವು ಪತ್ತೆಯಾಗಿಲ್ಲ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ತಾಯಿ ಮತ್ತು ಮಗವಿನ ಬಗ್ಗೆ ಮಾಹಿತಿ ಸಿಕ್ಕಿದರೆ ದೂರವಾಣಿ ಸಂಖ್ಯೆ 0820-2537 999 ಅಥವಾ ಮೊಬೈಲ್ ಸಂಖ್ಯೆ 94808 05447 ಅನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.