(www.vknews.in) ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿರುವ ಆ ದಿನ ಬಂದಾಗ , ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಪರಿಸರದ ಒಂದಷ್ಟು ಯುವಕರು ಸೇರಿ ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು !!! ಅದೇ ಕತಾರ್ ನಲ್ಲಿ ನಡೆಯುವ ವಿಶ್ವ ಕಪ್ ಫುಟ್ಬಾಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಮತ್ತು ವಿಶ್ವ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಫ್ಲೆಕ್ಸ್ ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯೂತ್ ಕೌನ್ಸಿಲ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು . ಅದೇ ರೀತಿ ಫ್ಲೆಕ್ಸ್ ಅನ್ನು ಕೊಡುಗೆ ಆಗಿ ಬುರ್ಜ್ ಅಲ್ ಸಾಹಿಲ್ ಸಂಸ್ಟೆ ಸೌದಿ ಅರೇಬಿಯಾ ಇದರ ಪಾಲುದಾರ ನಿಸಾರ್ ಮಂಚಿ ನೀಡಿ ಸಹಕರಿಸಿದ್ದರು. ಇದನ್ನು ಅಳವಡಿಸಲು ಸಹಕರಿಸಿದ ಎಲ್ಲರಿಗೂ ಮತ್ತು ಅಲ್ಲಿ ಉಪಸ್ಸ್ತಿತರಿದ್ದ ಸರ್ವರಿಗೂ ಕ್ರೀಡಾ ಪ್ರೇಮಿಯಾಗಿ ಧನ್ಯವಾದ ಗಳು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.