ನಾಟೆಕಲ್(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನಿಂದ ಅಂಗೀಕಾರ ಪಡೆದಿರುವ ರೇಂಜ್ ವ್ಯಾಪ್ತಿಯ ಮದರಸ/ಮಸೀದಿಗಳ ಆಡಳಿತ ಸಮಿತಿಯನ್ನು ಕೇಂದ್ರೀಕರಿಸಿ ರಚಿಸಲ್ಪಟ್ಟ ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಿನ್ಯಾ ರೇಂಜ್ ಇದರ ಮಹಾಸಭೆಯು ಅಸೈ-ನಾಟೆಕಲ್ ಅಲ್ ಬದ್ರಿಯಾ ಮದರಸ ಸಭಾಂಗಣದಲ್ಲಿ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.
ಇದರ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜಿಲ್ಲೆಯಿಂದ ನಿಯುಕ್ತಿ ಗೊಂಡಿರುವ ಅಡ್ಯಾರ್ ಕಣ್ಣೂರ್ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ರವರು ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದರು.
ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಯವರು ಚುನಾವಣಾ ವೀಕ್ಷಕರಾಗಿ ಭಾಗವಹಿಸಿ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವರೇ ಸಹಕರಿಸಿದರು.
ಅದರಂತೆ 2022-23, 2023-24 ಮತ್ತು 2024-25ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಈ ಕೆಳಕಂಡಂತೆ:
ಅಧ್ಯಕ್ಷರಾಗಿ ಇಬ್ರಾಹಿಮ್ ಕೊಣಾಜೆ, ಪ್ರಧಾನ ಕಾರ್ಯದರ್ಶಿ ಯಾಗಿ ಫಾರೂಕ್ ಕಿನ್ಯ, ಕೋಶಾಧಿಕಾರಿಯಾಗಿ ಮೊಯ್ದೀನ್ ಕುಂಞ ರಹ್ಮತ್ ನಗರ ಉಪಾಧ್ಯಕ್ಷರುಗಳಾಗಿ ಮೊಹ್ದೀನ್ ಬಾವು ಮರಾಠಿಮೂಲೆ ಮತ್ತು ಎಸ್.ಬಿ.ಹನೀಫ್ ಉಚ್ಚಿಲ, ಕಾರ್ಯದರ್ಶಿಗಳಾಗಿ ಹಮೀದ್ ಮದ್ಪಾಡಿ ಮತ್ತು ಬಶೀರ್ ಅಜ್ಜಿನಡ್ಕ ವರ್ಕಿಂಗ್ ಕಾರ್ಯದರ್ಶಿಯಾಗಿ ಪಿ.ಎಂ.ಇಸ್ಮಾಯಿಲ್ ಪನೀರ್, ಪತ್ರಿಕಾ ಕಾರ್ಯದರ್ಶಿಯಾಗಿ ಹಂಝ ಹನೀಫಿ ಹಾಗೂ ಜಿಲ್ಲಾ ಕೌನ್ಸಿಲರುಗಳಾಗಿ- ಅಬೂಸ್ವಾಲಿಹ್ ಹಾಜಿ ಮತ್ತು ಅಶ್ರಫ್ ಮರಾಠಿಮೂಲೆ ಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷರಾದ ಕೆ.ಎಸ್ ಅಬ್ದುಲ್ ಖಾದರ್ ಹಾಜಿ, ಕಿನ್ಯ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ, ಅಸೈ-ನಾಟೆಕಲ್ ಅಲ್ ಬದ್ರಿಯಾ ಮದರಸದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.