(www.vknews.in)
ಮಂಗಳೂರು: ಡಿಸೆಂಬರ್ 9,10 ರಂದು ಕಾವಲಕಟ್ಟೆಯಲ್ಲಿ ನಡೆಯುವ ಬೃಹತ್ ಉಲಮಾ ಕಾನ್ಫರೆನ್ಸ್ ಪ್ರಚಾರಾರ್ಥ ಮಂಗಳೂರು ಝೋನ್ ಸಮಾವೇಶವು ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ಸಭಾಂಗಣದಲ್ಲಿ ಇಂದು ಮಂಗಳೂರು ಝೋನ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ವಿದ್ವಾಂಸರು ಜಂಇಯ್ಯತುಲ್ ಉಲಮಾ ರಾಜ್ಯ ನಾಯಕರೂ ಆದ ಬಹು ಹೈದರ್ ಮದನಿ ಉಸ್ತಾದ್ ಕರಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ವಿದ್ವಾಂಸ ಬಹು ಮುಹಮ್ಮದ್ ಶರೀಫ್ ಮುಸ್ಲಿಯಾರ್ ಕೃಷ್ಣಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು ಉಲಮಾ ಕಾನ್ಫರೆನ್ಸ್ ನ ಆರ್ಥಿಕ ವ್ಯವಸ್ಥೆ ಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮ ದಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಜೆಪ್ಪು ರೇಂಜ್ ಅಧ್ಯಕ್ಷ ಬಶೀರ್ ಅಹ್ಸನಿ ಪಡೀಲ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಮಂಗಳೂರು ರೇಂಜ್ ಅಧ್ಯಕ್ಷ ಅಬ್ದುಲ್ ಅಝೀಝ್ ನೂರಾನಿ ಮುರ,ಝೋನ್ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ,ಬುಖಾರಿ ಮದನಿ ಅಡ್ಯಾರ್ ಪದವು ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ ನಮ್ಮನ್ನಗಲಿದ ಚೆರಿಯ ಎ ಪಿ ಉಸ್ತಾದ್ ಮುಹಮ್ಮದ್ ಮುಸ್ಲಿಯಾರ್ ಹೆಸರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಂಇಯ್ಯತುಲ್ ಉಲಮಾ ಮಂಗಳೂರು ಝೋನ್ ಪ್ರಧಾನ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.