ಮದೀನಾ (ವಿಶ್ವ ಕನ್ನಡಿಗ ನ್ಯೂಸ್) : ಮದೀನಾದ ಪ್ರವಾದಿಯವರ ಮಸೀದಿಯ ಪ್ರಾಂಗಣದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಮದೀನಾದ ಮಸ್ಜಿದ್-ಎ-ನಬವಿಯ ಅಂಗಳದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸೌದಿ ರೆಡ್ ಕ್ರೆಸೆಂಟ್ ಅಥಾರಿಟಿಯ ಮದೀನಾ ಶಾಖೆಯ ಮಹಾನಿರ್ದೇಶಕ ಡಾ.ಅಹ್ಮದ್ ಬಿನ್ ಅಲಿ ಅಲ್ ಜಹ್ರಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೌದಿ ರೆಡ್ ಕ್ರೆಸೆಂಟ್ ಅಥಾರಿಟಿ ಹರಮ್ ಅಂಗಳದಲ್ಲಿ ಹೆರಿಗೆ ನೋವು ಅನುಭವಿಸಿದ ಮಹಿಳೆಗೆ ತುರ್ತು ನೆರವು ನೀಡಿದೆ.
ಮಸ್ಜಿದ್-ಎ-ನಬವಿ ಆಂಬ್ಯುಲೆನ್ಸ್ ಕೇಂದ್ರದ ಸಿಬ್ಬಂಧಿಗಳು ಮತ್ತು ಸ್ವಯಂಸೇವಕರು ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದರು. ಆರೋಗ್ಯ ಸ್ವಯಂಸೇವಕರು ನರ್ಸ್ ಸಹಾಯದಿಂದ ಹೆರಿಗೆ ಆರೈಕೆಯನ್ನು ನಡೆಸಿದರು. ತಾಯಿ ಮತ್ತು ಮಗುವನ್ನು ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ನಂತರ ಅವರನ್ನು ಬಬ್ಜಿಬ್ರಿಲ್ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್-ಜಹ್ರಾನಿ ಹೇಳಿದರು.
ಮಗುವಿಗೆ ಆಕೆಯ ತಂದೆ ತೈಬಾ ಎಂದು ಹೆಸರಿಟ್ಟರು. ತುರ್ತು ಸಹಾಯದ ಸಂದರ್ಭದಲ್ಲಿ, ಆಂಬ್ಯುಲೆನ್ಸ್ ಸಹಾಯವನ್ನು ಪಡೆಯಲು 997 ಕ್ಕೆ ಕರೆ ಮಾಡಬೇಕು ಅಥವಾ ಹೆಲ್ಪ್ ಮಿ ಮತ್ತು ತವಾಲ್ಕಾನಾ ಅಪ್ಲಿಕೇಶನ್ ಗಳನ್ನು ಬಳಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.