ಬರೇಲಿ (ವಿಶ್ವ ಕನ್ನಡಿಗ ನ್ಯೂಸ್) : ಉತ್ತರ ಪ್ರದೇಶದ ಅಮ್ರೋಹಾದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿದ್ದಾನೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಪತಿ ತನ್ನ ಹೆಂಡತಿಯನ್ನು ಕೊಂದಿದ್ದಾನೆ. ಆರೋಪಿ ಮೊಹಮ್ಮದ್ ಅನ್ವರ್ ಪೊಲೀಸರ ಮುಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಸೋಮವಾರ ರಾತ್ರಿ ಮೊಹಮ್ಮದ್ ತನ್ನ ಪತ್ನಿಯಲ್ಲಿ ಎರಡನೇ ಬಾರಿ ಲೈಂಗಿಕ ಸಂಬಂಧವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದನು. ಈ ವೇಳೆ ಪತ್ನಿ ನಿರಾಕರಿಸಿದ್ದಾಳೆ. ಇದರಿಂದ ಮೊಹಮ್ಮದ್ ಕೋಪಗೊಂಡರು. ಹಗ್ಗದ ಸಹಾಯದಿಂದ ಪತ್ನಿಯ ಕತ್ತು ಹಿಸುಕಿ ಕೊಂದಿದ್ದಾನೆ. ಅನ್ವರ್ ತನ್ನ ಪತ್ನಿಯ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಮನೆಯಿಂದ 50 ಕಿ.ಮೀ ದೂರದಲ್ಲಿ ಎಸೆದಿದ್ದಾನೆ. ಬಳಿಕ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಂಗಳವಾರ, ಠಾಕುರ್ದ್ವಾರ್ನ ರತುಪುರ ಗ್ರಾಮದ ಬಳಿ ಅಪರಿಚಿತ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದರು. ಈ ವೇಳೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅವರು ಮಹಿಳೆಯ ಫೋಟೋಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಮೃತ ಮಹಿಳೆಯ ಫೋಟೋಗಳನ್ನು ನೋಡಿದ ನಂತರ, ಅಮ್ರೋಹಾ ಪೊಲೀಸರು ಠಾಕುರ್ದ್ವಾರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ಇದಾದ ನಂತರ ಪೊಲೀಸರು ಮೊಹಮ್ಮದ್ ಅನ್ವರ್ಗೆ ಕರೆ ಮಾಡಿ ಮೃತ ದೇಹವನ್ನು ಗುರುತಿಸಿದ್ದಾರೆ.
ಪೊಲೀಸರಿಗೆ ಅನ್ವರ್ ಮೇಲೆ ಅನುಮಾನ ಬಂದಿತ್ತು. ಅವರು ಅವನನ್ನು ತನಿಖೆ ಮಾಡಲು ಪ್ರಾರಂಭಿಸಿದರು. ಅನ್ವರ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ಮಹಿಳೆಯ ಹೆಸರು ರುಖ್ಸಾರ್ ಆಗಿದ್ದು, 2013 ರಲ್ಲಿ ಅನ್ವರ್ ಎಂಬಾತನನ್ನು ಮದುವೆಯಾಗಿದ್ದಳು. ಅನ್ವರ್ ಮತ್ತು ರುಖ್ಸಾರ್ ದಂಪತಿಗೆ 3 ಮಕ್ಕಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.