ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಡಿ.6ರಂದು ನಗರದ ಚಿನ್ನದ ಅಂಗಡಿಗೆ ನುಗ್ಗಿ ನೈತಿಕ ಪೊಲೀಸ್ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ನಾಲ್ವರನ್ನು ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ನಾಲ್ವರು ಚಿನ್ನದ ಶೋರೂಮ್ಗೆ ನುಗ್ಗಿ ಅಂಗಡಿಯಲ್ಲಿ ಗಲಾಟೆ ಮಾಡಿದ್ದರು.
ಬಂಧಿತ ಆರೋಪಿಗಳನ್ನು ಶಿಬಿನ್, ಗಣೇಶ್, ಪ್ರಕಾಶ್ ಮತ್ತು ಚೇತನ್ ಎಂದು ಗುರುತಿಸಲಾಗಿದೆ. ಕಾನೂನನ್ನು ಕೈಗೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಾನೂನು ಕ್ರಮ ಜರುಗಿಸುವುದಾಗಿ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಈ ಬಂಧನ ನಡೆದಿದೆ.
ಬಂಧಿತ ಆರೋಪಿಗಳು ಡಿಸೆಂಬರ್ 6 ರಂದು ಶೋರೂಮ್ನ ಮಾರ್ಕೆಟಿಂಗ್ ವಿಭಾಗದ ಮಹಿಳಾ ಉದ್ಯೋಗಿಯೊಂದಿಗೆ ಪುರುಷ ಉದ್ಯೋಗಿ ನಿಕಟ ಸಂಬಂಧದ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿ ಗಲಾಟೆ ನಡೆಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.