ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಪುರುಷ ಸಮಾಜವೇ ತಲೆ ತಗ್ಗಿಸುವಂತ ನೀಚ ಕಾರ್ಯ ನಡೆಸುತ್ತಿದ್ದ ಪಾಪಿ ಗಂಡನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಬೆಂಗಳೂರಿನ ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂದು ಗುರುತಿಸಲಾಗಿದೆ. ಈತ ತನ್ನ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ವಿಕೃತಿ ಮೆರೆಯುತ್ತಿದ್ದನು.
ಈತನ ಹಿಂಸೆಯನ್ನು ತಾಳಲಾರದೇ ಗಂಡನ ವಿರುದ್ದ ಪತ್ನಿ ದೂರು ನೀಡಿದ್ದು, ತನ್ನ ಗಂಡ ಇನ್ನೂ ಹಲವು ವಿಕೃತಗಾಮಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಪತ್ನಿ ಹೇಳಿಕೊಂಡಿದ್ದಾಳೆ. 2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ಅವರನ್ನು ಮಹಿಳಾ ಟೆಕ್ಕಿ ವಿವಾಹವಾಗಿದ್ದಳು. ಮೊದಲ ನಾಲ್ಕು ವರ್ಷಗಳು ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ನಂತರ 2015 ರಿಂದ ಆರೋಪಿ ಪತಿ ಜಾನ್ ಪಾಲ್ ತನ್ನ ವಿಕೃತಿ ಶುರು ಮಾಡಿದ್ದನು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ
ಗೆಳೆಯರನ್ನು ತನ್ನ ಮನೆಗೆ ಕರೆದು ಪಾರ್ಟಿ ಮಾಡಿ ಗೆಳೆಯರೊಂದಿಗೆ ಬೆಡ್ ಶೇರ್ ಮಾಡುವಂತೆ ಆತ ಹಿಂಸೆ ನೀಡುತ್ತಿದ್ದನು. ಆತನ ಹಿಂಸೆ ತಾಳಲಾರದೆ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಳು. ಆರೋಪಿಯು ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನು ಮಲಗಿಸಿದ್ದನು. ಸ್ವಂತ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ಪೋಟೋ, ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದನು. ಪ್ರತಿ ವಾರ ಇದೇ ರೀತಿ ನಡೆಯುತ್ತಿದ್ದು, ಈ ಘಟನೆಗಳಿಂದ ಬೇಸತ್ತು ಗಲಾಟೆ ಮಾಡಿದರೂ ತನ್ನನ್ನು ಗಂಡ ಬಿಡುತ್ತಿರಲಿಲ್ಲ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.
ಆರೋಪಿ ಪತಿ ತನ್ನ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೆ ನಾದಿನಿಗೂ ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ವೇಳೆ ಆತ ತನ್ನ ಗೆಳೆಯರೊಂದಿಗೆ ಪತ್ನಿ ಮಲಗಿದ್ದ ವಿಡಿಯೋ, ಹಾಗೂ ಅಶ್ಲೀಲ ಪೋಟೊ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.