ಕೊನ್ನಿ (ವಿಶ್ವ ಕನ್ನಡಿಗ ನ್ಯೂಸ್) : ಆದಿವಾಸಿ ದಂಪತಿಯ 11 ತಿಂಗಳ ಹೆಣ್ಣು ಮಗುವೊಂದು ಎದೆಹಾಲು ಗಂಟಲಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದೆ. ಪಥನಂತಿಟ್ಟದ ಆರುವಪ್ಪುಲಂ ಪಂಚಾಯತ್ನ ಕೊಟ್ಟಂಪಾರ ಆದಿವಾಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಲಪಂಡಾರ ಸಮುದಾಯಕ್ಕೆ ಸೇರಿದ ಕೊಟ್ಟಂಪಾರ ಆದಿವಾಸಿ ಕಾಲೋನಿಯ ಪದ್ಮನಾಭನ್ ಮತ್ತು ವಿಲಾಸಿನಿ ದಂಪತಿಯ ಹೆಣ್ಣು ಮಗು ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಮಲಗಿದ ನಂತರ, ಮರುದಿನ ಬೆಳಿಗ್ಗೆ ಮಗು ಶವವಾಗಿ ಕಂಡುಬಂದಿದೆ. ನಂತರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಎದೆಹಾಲುಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.