(www.vknews.in) ಮೈಸೂರು: ವಾಹನ ಸಂಚಾರವನ್ನು ಸುಗಮ ಮಾಡುವ ಸಲುವಾಗಿ 80 ಅಡಿಯಿರುವ ನ್ಯೂ ಕಾಂತರಾಜ ಅರಸು ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ರಸ್ತೆ ವಿಸ್ತರಣೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ವಾಹನ ಸಂಚಾರಿಗಳಿಗೆ ಬಹಳ ಅನುಕೂಲವಾಗಲಿದೆ. ಹೊಸ ರಸ್ತೆಯಿಂದ 200ಕ್ಕೂ ಹೆಚ್ಚು ಬಡಾವಣೆಯ ನಿವಾಸಿಗಳು ಮೈಸೂರಿನ ವಿವಿಧ ಸ್ಥಳಗಳನ್ನು ತಲುಪಲು ಸಹಾಯವಾಗುತ್ತದೆ. ಹಿಂದಿಗಿಂತ ಸುಲಭವಾಗಿ, ಅಡೆತಡೆಗಳಿಲ್ಲದೆ ಸ್ಥಳೀಯರು ಪ್ರತಿದಿನ ಈ ರಸ್ತೆಯನ್ನು ಬಳಸಬಹುದು.
ರಸ್ತೆ ವಿಸ್ತರಣೆಯಿಂದಾಗಿ ವರ್ತುಲ ರಸ್ತೆಯಿಂದ ನಗರದ ಒಳಭಾಗಕ್ಕೆ ಇರುವ ದೂರ ಅರ್ಧದಷ್ಟು ಕಡಿಮೆಯಾಗಲಿದೆ. ವರ್ತುಲ ರಸ್ತೆಯ ಮೂಲಕ ವಿಜಯನಗರ ನಾಲ್ಕನೆಯ ಹಂತಕ್ಕೆ ತೆರಳುವವರಿಗೆ ಈ ರಸ್ತೆ ಬಹಳ ಉಪಯುಕ್ತ. ಒಟ್ಟಾರೆ ರಸ್ತೆ ವಿಸ್ತರಣೆಯಿಂದಾಗಿ ನಗರದ ವಾಣಿಜ್ಯ ಹಾಗೂ ವಸತಿ, ಈ ಎರಡೂ ಅಂಶಗಳಿಗೆ ಉತ್ತಮ ಭವಿಷ್ಯ ಇದೆ. ಹೊಸ ರಸ್ತೆಯಲ್ಲಿ ಸಣ್ಣಪುಟ್ಟ ಅಂಗಡಿಗಳು, ದೊಡ್ಡ ಮಳಿಗೆಗಳು ಎಲ್ಲವೂ ತಲೆ ಎತ್ತುವ ಕಾರಣ ಉದ್ಯೋಗಾವಕಾಶಗಳು ಸಹ ಸಿಗಲಿವೆ.
ಈ ಬಗ್ಗೆ ಮಾತನಾಡಿದ ಇಲ್ಲಿನ ನಿವಾಸಿ ಎನ್.ವಿ.ರಾವ್ ಅವರು, ಕಾಂತರಾಜ ಅರಸು ರಸ್ತೆಯನ್ನು ನಾನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಇಲ್ಲಿನ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಈಗ ಈ ರಸ್ತೆ ವಿಸ್ತರಣೆಯಾಗುತ್ತೆ ಎಂದು ಕೇಳಿ ಬಹಳ ಸಂತೋಷವಾಯಿತು. ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ಬಡಾಬವಣೆಗಳಿಗೆ ಬಹಳ ಉಪಯೋಗವಾಗಲಿದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.