(www.vknews.in) ದುಬೈ: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೂರುಲ್ ಹುದಾ ದುಬೈ ಸಮಿತಿಯ ನಾಲ್ಕನೇ ವಾರ್ಷಿಕಮಹಾಸಭೆಯು ತಾರೀಕು 26/11/2022ರಂದು ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ9.30ಕ್ಕೆ ದೇರಾ ನೈಫ್ ಕಾಸರಗೋಡು ಡೈನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಜನಾಬ್ ಅನ್ವರ್ ಮಾಣಿಲ ಅವರ ಘನಅಧ್ಯಕ್ಷತೆಯಲ್ಲಿ ಜರುಗಿತು.
ಸಮಿತಿಯ ಉಪದೇಶಕರಾದ ಜನಾಬ್ ಬದ್ರುದ್ದೀನ್ ಹೆಂತಾರ್ ಅವರು ದುವಾದೊಂದಿಗೆ ಸಭೆಗೆ ಚಾಲನೆ ನೀಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಂಗಳಾಡಿ ಅವರು ನೆರೆದ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.
ಸಮಿತಿಯ ಉಪದೇಶಕರಾದ ಜನಾಬ್ ಅಬ್ದುಲ್ ಸಲಾಂ ಬಪ್ಪಲಿಗೆ ಅವರು ಮಾತನಾಡಿ ಊರಿನಲ್ಲಿ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ನಾವು ಇನ್ನಷ್ಟು ಸಹಾಯ,ಸಹಕಾರ ನೀಡಬೇಕೆಂದು ಹೇಳಿ ಪವಿತ್ರ ಖುರ್ಆನಿನ ಸೂಕ್ತದೊಂದಿಗೆ ಉದ್ಘಾಟಿಸಿದರು.
ಸಮಿತಿಯ ಕಾರ್ಯದರ್ಶಿ ತಾಜುದ್ದೀನ್ ಕೊಚ್ಚಿ ಅವರು ವಾರ್ಷಿಕ ವರದಿ ವಾಚಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಂಗಳಾಡಿ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರ ಸಭೆಯ ಅನುಮತಿಯೊಂದಿಗೆ ತಕ್ಬೀರಿನ ಮೂಲಕ ಅಂಗೀಕರಿಸಲಾಯಿತು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅನ್ವರ್ ಮಾಣಿಲ ತಮ್ಮ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ನೆನಪಿಸಿ ಮುಂದೆಯೂ ಎಲ್ಲರ ಸಹಕಾರ ಕೋರಿದರು ಮತ್ತು ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸಿದರು.
ಸಮಿತಿಯ ಉಪದೇಶಕರಾದ ಜನಾಬ್ ನೂರ್ ಮುಹಮ್ಮದ್ ನೀರ್ಕಜೆ ಅವರು ಚುನಾವಣಾ ಅಧಿಕಾರಿಯಾಗಿ ನೂತನ ಸಮಿತಿಯ ರಚೆನೆಗೆ ನೇತೃತ್ವವಹಿಸಿದರು. ಈ ಕೆಳಗಿನ ಪಧಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಧಾರ್ಮಿಕಸಲಹೆಗಾರರು: ಸುಲೈಮಾನ್ ಮೌಲವಿ ಕಲ್ಲೆಗ ,ಹಮೀದ್ ಮುಸ್ಲಿಯಾರ್ ನೀರ್ಕಜೆ, ಅಬ್ದುಲ್ಲಾ ನಯೀಮಿ , ಶಾಹುಲ್ .ಬಿ .ಸಿ.ರೋಡ್ ಗೌರವಸಲಹೆಗಾರರು: ಶೆರೀಫ್ ಕಾವು, ಯೂಸುಫ್ ಈಶ್ವರಮಂಗಲ , ಅಬ್ದುಲ್ ಲತೀಪ್ ಕೌಡಿಚ್ಚಾರ್, ನೂರ್ ಮುಹಮ್ಮದ್ ನೀರ್ಕಜೆ, ಅಶ್ರಫ್ ಶಾ ಮಾಂತೂರು, ಬದ್ರುದ್ದೀನ್ ಹೆಂತಾರ್,ಅಶ್ರಫ್ ಆರ್ತಿಕೆರೆ, ಇಬ್ರಾಹಿಂ ಆತೂರ್.
ಗೌರವಾಧ್ಯಕ್ಷರು : ಅಬ್ದುಲ್ ಸಲಾಂ ಬಪ್ಪಲಿಗೆ
ಅದ್ಯಕ್ಷರು : ಅನ್ವರ್ ಮಾಣಿಲ ಕಾರ್ಯಾದ್ಯಕ್ಷರು: ಇಸ್ಮಾಯಿಲ್ ತಿಂಗಳಾಡಿ ಪ್ರಧಾನಕಾರ್ಯದರ್ಶಿ : ನವಾಝ್ ಕಟ್ಟತ್ತಾರ್ ಕೋಶಾಧಿಕಾರಿ : ಅಲಿ ಈಶ್ವರಮಂಗಲ
ಉಪಾಧ್ಯಕ್ಷರು : ಅಝೀಝ್ ಸೋಂಪಾಡಿ ,ನವಾಜ್.ಬಿ.ಸಿ.ರೋಡ್, ಮುಹಮ್ಮದ್ ಪಳ್ಳತ್ತೂರು, ಆಸಿಫ್ ಮರೀಲು.
ಕಾರ್ಯನಿರ್ವಾಹಕ ಕಾರ್ಯದರ್ಶಿ: ಜಾಬಿರ್ ಬಪ್ಪಲಿಗೆ
ಕಾರ್ಯದರ್ಶಿಗಳು : ಬಾತಿಷಾ ಕಾವು , ತಾಜುದ್ದೀನ್ ಕೊಚ್ಚಿ, ಜಾಬಿರ್ ಬೆಟ್ಟಂಪಾಡಿ
ಸಂಘಟನಾ ಕಾರ್ಯದರ್ಶಿ : ಉಸ್ಮಾನ್ ಮರೀಲು, ಜೌಹರ್ ಉರುಮಣೆ , ಮೂಸಕುಂಞಿ ಕಾವು,
ಲೆಕ್ಕಪರಿಶೋಧಕರು: ನಾಸಿರ್ ಬಪ್ಪಲಿಗೆ,, ರಿಫಾಯಿ ಗೂನಡ್ಕ.
ಸಂಚಾಲಕರು: ಅಬ್ಬಾಸ್ ಕೇಕುಡೆ,ಅಝರ್ ಹಂಡೆಲ್ ,ಹಾರಿಸ್ ಪಾಪೆತಡ್ಕ ,ಶಬೀರ್ ಫರಂಗಿಪೇಟೆ ,ನಿಝಾಮ್ ತೋಡಾರ್ , ತಾಹಿರ್ ಹೆಂತಾರ್ ,ಅಕ್ಬರ್ ಹಂಡೇಲು,ಇದ್ರೀಸ್ ಕಾವು, ಯೂಸುಫ್ ಬಶ್ರಾ,ಸಾಬಿತ್ ಆತೂರು ,ಬಷೀರ್ ಕೆಮ್ಮಿಂಜೆ, ರಫೀಕ್ ಕೊಡಗು, , ರಹಿಮಾನ್ ಪೆರಾಜೆ, ಇಫ್ತಿಕಾರ್ ಕಣ್ಣೂರು, ಇಸಾಕ್ ಕುಡ್ತಮುಗೇರು, ಜಲೀಲ್ ಕೆಲಿಂಜ ,
ಮಾಧ್ಯಮಸಂಯೋಜಕರು: ಅಬೂಬಕ್ಕರ್ ಮುಂಡೊಳೆ, ಉಮ್ಮರ್ ಇಂದುಮೂಲೆ ,ರಾಫಿ ಮಾಡನ್ನೂರ್
ಕಾರ್ಯಕಾರಿಸಮಿತಿಸದಸ್ಯರು : ಆಸಿಫ್ ಎ , ಶೆರೀಫ್ ಕಟ್ಟತ್ತಾರ್ ,ಝಯಿನುದ್ದೀನ್ .S.M ,ಇಕ್ಬಾಲ್ಅರ್ಶದಿ , ಶಬೀರ್ ಪಡುಬಿದ್ರಿ, ಝಕಾರಿಯಾ ಮುಲಾರ್, ಶಕೂರ್ ಮಣಿಲ ,ಮುನೀರ್ ಸಾಲ್ಮರ,ಜಲೀಲ್ ಉಕ್ಕುಡ, ಅಲೀ ವಿಟ್ಲ , ಇಸಾಕ್ ಮುಕ್ವೆ , ಆಸಿಫ್ ಮಾಡನ್ನೂರು , ಅನ್ಸಾಫ್ ಪಾತೂರು, ಅಬೂಬಕ್ಕರ್ ಬಜಾಲ್, ಸಯೀದ್ ಪುರುಷರಕಟ್ಟೆ, ಬಾತಿಷ ಪರ್ಲಡ್ಕ, ಅಬ್ದುಲ್ ಬಾರಿ ಕೊಳ್ತಿಗೆ, ಅಶ್ರಫ್ ಮಣಿಲ ,ತಯ್ಯಿಬ್ ಹೆಂತಾರ್ ,ಮುಹಮ್ಮದ್ಶಿರಃ B.C .ರೋಡ್ , ಹನೀಫ್ ಬುಳೇರಿಕಟ್ಟೆ, ಅಶ್ರಫ್ ಬಾಂಬಿಲ, ಆಶಿಕ್ ಕೂರ್ನಡ್ಕ ಮೊದಲಾದವರನ್ನು ಆಯ್ಕೆಮಾಡಲಾಯಿತು ಮತ್ತು ಆದರಣೀಯ ಸಯ್ಯದ್ ಅಸ್ಕರ್ ಅಲಿ ತಂಗಳ್ ಅವರ ನೇತೃತ್ವದಲ್ಲಿ ತಕ್ಬೀರನೊಂದಿಗೆ ಅನುಮೋದಿಸಲಾಯಿತು.
ನೂತನ ಸಮಿತಿಯನ್ನು ಅಭಿನಂದಿಸಿ ಬಹುಮಾನ್ಯ ಅಸ್ಕರ್ ಅಲಿ ತಂಙಳ್, ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಷರೀಫ್ ಕಾವು, ನೂರ್ ಮುಹಮ್ಮದ್ ನೀರ್ಕಜೆ ಸಮಿತಿಗೆ ಶುಭಹಾರೈಸಿದರು.
ಜಾಬಿರ್ ಬೆಟ್ಟಂಪಾಡಿ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.