(www.vknews.in) ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್, 3 ದಶಲಕ್ಷಕ್ಕಿಂತ ಹೆಚ್ಚಿನ ನೋಂದಾಯಿತ ಮೆಟ್ರೋ ಗ್ರಾಹಕರಿಗೆ 48 ದಿನಗಳವರೆಗೆ ಸುಲಭವಾದ ಬಡ್ಡಿರಹಿತ ಕ್ರೆಡಿಟ್ ಒದಗಿಸುತ್ತದೆ.
• ಗ್ರಾಹಕರು ಪ್ರತಿ ತಿಂಗಳು ರೂ. 10,000ದವರೆಗೆ ಕ್ಯಾಶ್ಬ್ಯಾಕ್ ಗಳಿಸಬಹುದು
*ಬೆಂಗಳೂರು, 17 ಡಿಸಂಬರ್, 2022:* ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ (“KMBL”/Kotak), ಭಾರತದ ಮುಂಚೂಣಿ ಸಂಘಟಿತ ಸಗಟುವ್ಯಾಪಾರ ಮತ್ತು ಆಹಾರತಜ್ಞ ಸಂಸ್ಥೆಯಾದ ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾದ ಸಹಯೋಗದೊಂದಿಗೆ ಇಂದು ಹೊಸ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ‘METRO Kotak Credit Card’ಅನ್ನು ಪರಿಚಯಿಸಿತು. ಈ ಕಾರ್ಡ್, 3 ದಶಲಕ್ಷಕ್ಕಿಂತ ಹೆಚ್ಚಿನ ನೋಂದಾಯಿತ ಮೆಟ್ರೋ ಇಂಡಿಯಾ ಗ್ರಾಹಕರಿಗೆ 48 ದಿನಗಳವರೆಗೆ ಸುಲಭವಾದ ಬಡ್ಡಿರಹಿತ ಸಾಲಸೌಲಭ್ಯ ಒದಗಿಸುತ್ತದೆ. ಈ ಕಾರ್ಡ್ಅನ್ನು RuPay ಕಾರ್ಯಜಾಲದಲ್ಲಿ ಪರಿಚಯಿಸಲಾಗಿದೆ.
ಮೆಟ್ರೋದ ಗ್ರಾಹಕ ಬೇಸ್, ಸಣ್ಣ ವ್ಯಾಪಾರಸ್ಥರು, ಕಿರಾಣಾ ಮಾಲೀಕರು, ಎಮ್ಎಸ್ಎಮ್ಇಗಳು, ಸಣ್ಣ ರೆಸ್ಟಾರೆಂಟ್ಗಳು HoReCa (ಹೋಟೆಲುಗಳು, ರೆಸ್ಟಾರೆಂಟ್ಗಳು ಮತ್ತು ಕೇಟರರ್ಸ್) ಸಂಸ್ಥೆಗಳು, ಕಚೇರಿಗಳು, ಸಂಸ್ಥೆಗಳು, ಇನ್ಸ್ಟಿಟ್ಯೂಶನ್ಸ್, ಹಾಗೂ ಸ್ವ-ಉದ್ಯೋಗಸ್ಥ ವೃತ್ತಿಪರರನ್ನು ಒಳಗೊಂಡಿದೆ.
ಹೊಸ ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್ಅನ್ನು ಭಾರತದ 21 ನಗರಗಳಲ್ಲಿ ಸ್ಥಾಪಿತವಾಗಿರುವ 31 ಸಗಟುವ್ಯಾಪಾರ ವಿತರಣಾ ಕೇಂದ್ರಗಳ(ಮಳಿಗೆಗಳು) ಮೆಟ್ರೋ ಕಾರ್ಯಜಾಲದಾದ್ಯಂತ ಮತ್ತಿವಾಣಿಜ್ಯ ವೇದಿಕೆಯಾದ ಮೆಟ್ರೋ ಹೋಲ್ಸೇಲ್ ಆಪ್ನಲ್ಲಿ ಬಳಸಿಕೊಳ್ಳಬಹುದಾಗಿದೆ.
*ವಿಶೇಷಾಂಶಗಳು ಮತ್ತು ಪ್ರಯೋಜನಗಳು:* • ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್ಅನ್ನು, ಮೆಟ್ರೋದಿಂದ ತಮ್ಮ ಚಿಲ್ಲರೆ ಅಂಗಡಿಗಳಿಗೆ ಸ್ಟಾಕ್ ಮಾಡಿಕೊಳ್ಳುವುದಕ್ಕಾಗಿ ಖರೀದಿಸುವ ಚಿಲ್ಲರೆವ್ಯಾಪಾರಸ್ಥರ ಸಾಲ ಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. • ಬಿ2ಬಿ ವರ್ಗದಲ್ಲಿ ಆಕರ್ಷಕ ಸಾಲ ಸೌಲಭ್ಯ- 48 ದಿನಗಳವರೆಗೆ ಮೆಟ್ರೋದ ವ್ಯಾಪಾರಸ್ಥ ಗ್ರಾಹಕರಿಗೆ ಬಡ್ಡಿರಹಿತ ಸಾಲ • ಸಾಲ ಮಿತಿಯ ಶ್ರೇಣಿ- ರೂ. 25,000ದಿಂದ ಮೆಟ್ರೋದೊಂದಿಗೆ ಗ್ರಾಹಕರ ಖರೀದಿ ಪ್ರವೃತ್ತಿಯ ಆಧಾರದ ಮೇಲೆ ಗರಿಷ್ಟ ಸಾಲ • ನಗದು ಅಥವಾ ಆನ್ಲೈನ್ ವರ್ಗಾವಣೆ ಮೂಲಕ ಅನುಕೂಲಕರ ಮರುಪಾವತಿ ಆಯ್ಕೆಗಳು • ಮೆಟ್ರೋದಲ್ಲಿ ತಮ್ಮ ಮಾಸಿಕ ವ್ಯಯಗಳಿಗೆ ಒಳಪಟ್ಟು, ಕಾರ್ಡ್ ಬಳಕೆದಾರರು ಪ್ರತಿ ತಿಂಗಳು ರೂ. 10,000ದವರೆಗೆ ಕ್ಯಾಶ್ಬ್ಯಾಕ್ ಗಳಿಸಬಹುದು • ಬ್ಯಾಂಕ್ ಖಾತೆ ಇಲ್ಲದ ಮೆಟ್ರೋ ವ್ಯಾಪಾರಸ್ಥ ಗ್ರಾಹಕರೂ ಕೂಡ ಕಾರ್ಡ್ಗೆ ಅಪ್ಲೈ ಮಾಡಬಹುದು • ಕಾರ್ಡ್ಗೆ ಅಪ್ಲೈ ಮಾಡುವುದಕ್ಕೆ ಕನಿಷ್ಟ ದಾಖಲೀಕರಣ ಮತ್ತು ಸುಲಭ ಪ್ರಕ್ರಿಯೆ • “ಸೇರಿಕೊಳ್ಳುವ” ಮತ್ತು”ವಾರ್ಷಿಕ” ಶುಲ್ಕ ಇಲ್ಲ
“ದೇಶದ ಚಿಲ್ಲರೆ ವ್ಯಾಪಾರ ಉದ್ದಿಮೆಯ ಬೆನ್ನೆಲುಬಾಗಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳು, ಕಿರಾಣಾ ಅಂಗಡಿ ಮಾಲೀಕರು ಹಾಗು ಎಮ್ಎಸ್ಎಮ್ಇಗಳಿಗಾಗಿ ಸೂಕ್ತವಾದ ಕ್ರೆಡಿಟ್ ಕಾರ್ಡ್ ಪರಿಚಯಿಸಲು ನಮಗೆ ಬಹಳ ಸಂತೋಷವಾಗುತ್ತಿದೆ.”ಎಂದು ಹೇಳಿದ ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ನ ಕ್ರೆಡಿಟ್ ಕಾರ್ಡ್ಗಳ ವಿಭಾಗದ ಬಿಜಿನೆಸ್ ಹೆಡ್ ಶ್ರೀ ಫ್ರೆಡೆರಿಕ್ ಡಿಸೂಜಾ, “ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಚಿಲ್ಲರೆ ವ್ಯಾಪಾರ ಮಾರುಕಟ್ಟೆಯಲ್ಲಿ ಸುಮಾರು 80% ಪಾಲು ಅಸಂಘಟಿತ ವ್ಯಾಪಾರಸ್ಥರಿದ್ದಾರೆ. ಈ ವಿಶಿಷ್ಟ ಕೊಡುಗೆಯ ಮೂಲಕ ಈ ವರ್ಗದ ಸಾಲ ಮತ್ತು ಹಣಕಾಸು ಅಗತ್ಯಗಳನ್ನು ನಾವು ಪೂರೈಸುತ್ತಿದ್ದೇವೆ. ಇದೊಂದು ಗಣನೀಯವಾದ ಮಾರುಕಟ್ಟೆ ಅವಕಾಶವಾಗಿದೆ.”ಎಂದರು.
ಕಿರಾಣಾಗಳು ಮತ್ತು ಎಮ್ಎಸ್ಎಮ್ಇಗಳ ಧ್ವನಿಯಾಗಿರುವಲ್ಲಿ ಮೆಟ್ರೋದ ಬದ್ಧತೆಯ ಬಗ್ಗೆ ಮಾತನಾಡುತ್ತಾ, ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾದ ಎಮ್ಡಿ ಮತ್ತು ಸಿಇಒ ಶ್ರೀ ಅರವಿಂದ್ ಮೆದಿರಟ್ಟ, “ಸ್ವತಂತ್ರ ವ್ಯಾಪಾರದ ಚಾಂಪಿಯನ್ ಆಗಿ ನಾವು ಸದಾ ಸ್ಥಳೀಯ ವ್ಯಾಪಾರಗಳು ಮತ್ತು ಎಮ್ಎಸ್ಎಮ್ಇ ಪರಿಸರ-ವ್ಯವಸ್ಥೆಯನ್ನು ಬೆಂಬಲಿಸುವುದಕ್ಕೆ ಮತ್ತು ಅವರು ತಮ್ಮ ವ್ಯಾಪಾರಗಳನ್ನು ಇನ್ನಷ್ಟು ಲಾಭದಾಯಕ ಮತ್ತು ಯಶಸ್ವಿಗೊಳಿಸಿಕೊಳ್ಳಲು ಅವರನ್ನು ಸಬಲಗೊಳಿಸುವುದಕ್ಕೆ ನಾವು ಸದಾ ಬದ್ಧರಾಗಿದ್ದೇವೆ. ಭಾರತದ ಚಿಲ್ಲರೆ ವ್ಯಾಪಾರ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಚಿಲ್ಲರೆ ವ್ಯಾಪಾರಿಗಳು, ಕಿರಾಣಾಗಳು, ಮತ್ತು ಎಮ್ಎಸ್ಎಮ್ಇಗಳಿಗೆ ಹೆಚ್ಚು ದ್ರವೀಯ ಮಾರ್ಗಗಳನ್ನು ಒದಗಿಸುವ ಕೋಟಕ್ ಮಹಿಂದ್ರಾ ಬ್ಯಾಂಕ್ನೊಂದಿಗೆ ಕೈಜೋಡಿಸುತ್ತಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ. ಇದು, ನಮ್ಮ ಗ್ರಾಹಕರು ಅವರ ಕಾರ್ಯ ಬಂಡವಾಳ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರಿಗೆ ವೈಯಕ್ತೀಕೃತ ಮತ್ತು ತೊಂದರೆಯಿಲ್ಲದ ಹಣಕಾಸು ಪರಿಹಾರಗಳನ್ನು ಒದಗಿಸಬೇಕೆನ್ನುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ.’ ಎಂದು ಹೇಳಿ ಮುಂದುವರಿದು, “ ಕಿರಾಣಾಗಳಿಗಾಗಿ ನಾವು ಮಾಡಿರುವ ಡಿಜಿಟಲ್ ಪರಿಹಾರವು, ಬೇಡಿಕೆ ಮತ್ತು ಸರಬರಾಜು ಎರಡೂ ಕಡೆ ಮೌಲ್ಯವರ್ಧನೆ ಮಾಡುವುದಕ್ಕಾಗಿಯೇ ಇದೆ.; ಸರಬರಾಜು ಬದಿಯಲ್ಲಿ, ನಾವು ಒಂದೇ ಸೂರಿನಡಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ವ್ಯಾಪಕ ಶ್ರೇಣಿಯ ವಸ್ತುಗಳನ್ನು ಖರೀದಿಸುವ ಸೌಲಭ್ಯ ಒದಗಿಸುತ್ತೇವೆ. ಇದು, ಇನ್-ಸ್ಟೋರ್ ಮೂಲಕ ಆಗಿರಬಹುದು ಅಥವಾ ನಮ್ಮ ಇವಾಣಿಜ್ಯ ಕೊಡುಗೆಗಳ ಮೂಲಕವೂ ಆಗಿರಬಹುದು. ಶೀಘ್ರವಾದ ಪೂರೈಕೆ ಮತ್ತ 24 ಘಂಟೆಗಳೊಳಗೆ ಮನೆಬಾಗಿಲಿಗೆ ಡೆಲಿವರಿ ಸೇವೆಯೊಂದಿಗೆ ಇದು ಅವರಿಗೆ ಅಪಾರ ಸಮಯ ಮತ್ತು ವೆಚ್ಚ ಉಳಿತಾಯ ಮಾಡಿದೆ. ಇದರ ಜೊತೆಗೆ, ಕಿರಾಣಾಗಳಿಗೆ ಬೇಡಿಕೆ ಹೆಚ್ಚಿಸಲು ನಾವು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತೇವೆ; ಅವರು ತಮ್ಮ ಆದಾಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತೇವೆ ಮತ್ತು ನಮ್ಮ ಸ್ಮಾರ್ಟ್ ಕರಾಣಾ ಪ್ರೊಗ್ರಾಮ್ ಮೂಲಕ ಡಿಜಿಟೀಕರಣ ಮತ್ತು ಆಧುನಿಕರಣದಿಂದ ಭದ್ರನೆಲೆಯ ಜೊತೆಗೆ ಅವರ ಕಾರ್ಯ ಬಂಡವಾಳ ಸಾಮರ್ಥ್ಯವನ್ನು ವರ್ಧಿಸಲು ಸಾಲ ಲಭ್ಯತೆಯ ಸೌಲಭ್ಯವನ್ನೂ ಒದಗಿಸುತ್ತೇವೆ. ಈ ರೀತಿಯ ದ್ರವೀಕರಣ ಪರಿಹಾರಗಳು ಅವರು ಮೇಲಿನ ಗೆರೆ ಮತ್ತು ಕೆಳಗಿನ ಗೆರೆ ಎರಡರಲ್ಲೂ ಬೆಳದು ನಗದು ಹರಿವನ್ನು ಸುಧಾರಿಸಿಕೊಂಡು, ತಮ್ಮ ವ್ಯಾಪಾರವನ್ನು ಇನ್ನಷ್ಟು ದೀರ್ಘಕಾಲ ಇರುವಂತೆ ಮುನ್ನಡೆಸಿಕಂಡ ಹೋಗುವುದಕ್ಕೆ ನೆರವಾಗುತ್ತವೆ.”ಎಂದೂ ಹೇಳಿದರು.
ಈ ಪರಿಚಯದ ಬಗ್ಗೆ ಮಾತನಾಡುತ್ತಾ, RuPay, ಎನ್ಪಿಸಿಐದ ಮುಖ್ಯಸ್ಥ ಡೆನ್ನಿ ವಿ ಥಾಮಸ್, “RuPay ಕಾರ್ಯಜಾಲದಲ್ಲಿ ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್ಅನ್ನು ಪರಿಚಯಿಸುವಲ್ಲಿ, ಕೋಟಕ್ ಮಹಿಂದ್ರಾ, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿದೊಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಹರ್ಷವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳ ಅಗತ್ಯಗಳನ್ನು ಪೂರೈಸಿ ಲಾಭದಾಯಕತೆ ಮತ್ತು ದಿನನಿತ್ಯದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಅವರು ಮುನ್ನಡೆಯುವುದಕ್ಕೆ ನೆರವಾಗುವ ರೀತಿಯ ಈ ಕಾರ್ಡ್ಅನ್ನು ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ನಾವು ನಂಬುತ್ತೇವೆ. ಇದಕ್ಕೆ ತಕ್ಕಂತೆ, ಪಾವತಿಗಾಗಿ 48 ದಿನಗಳವರೆಗೆ, ಚಿಲ್ಲರೆ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಲು ಈ ಕಾರ್ಡ್ ನೆರವಾಗುತ್ತದೆ. ಎಲ್ಲಾ ಗ್ರಾಹಕ ವರ್ಗಗಳಿಗೂ ತತ್ಸಂಬಂಧಿತವಾದ ಮತ್ತು ಉಪಯುಕ್ತವಾದ ವಿನೂತನವಾದ ಪಾವತಿ ಪರಿಹಾರಗಳನ್ನು ಆವಿಷ್ಕರಿಸಿ ಒದಗಿಸುವುದಕ್ಕಾಗಿ ಈ ಪರಿಸರವ್ಯವಸ್ಥೆಯ ಜೊತೆಜೊತೆಗೇ ಕೆಲಸ ಮಾಡುತ್ತಿರುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತಿದೆ.”ಎಂದರು.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.npci.org.in/
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.