ಕತಾರ್ (ವಿಶ್ವ ಕನ್ನಡಿಗ ನ್ಯೂಸ್) : ನಿನ್ನೆ ನಡೆದ ವಿಶ್ವ ಕಪ್ ಫುಟ್ಬಾಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಮೂಲಕ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಫ್ರಾನ್ಸ್ ತಂಡದ ಯುವ ಆಟಗಾರ ಕೈಲಿಯನ್ ಎಂಬಪ್ಪೆ ರೋಚಕ ಆಟ ಪ್ರದರ್ಶಿಸಿದರೂ ಅವರ ಶ್ರಮ ವ್ಯರ್ಥವಾಯಿತು.
ರೋಚಕ ಪಂದ್ಯದಲ್ಲಿ ಗೆಲುವಿನ ಆಸೆ ಕಂಡಿದ್ದ ಫ್ರಾನ್ಸ್ ಸೋಲು ಒಪ್ಪಿಕೊಂಡಿತು. ಪಂದ್ಯದ ಬಳಿಕ ಎಂಬಪ್ಪೆ ಸೋಲಿನಿಂದ ತೀವ್ರ ಬೇಸರಗೊಂಡಿದ್ದರು. ಈ ಸಮಯದಲ್ಲಿ ಎಂಬಪ್ಪೆ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸಮಾಧಾನಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.