ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಉಗ್ರರನ್ನು ಸಮರ್ಥಿಸುವವರು ಹಾಗು ಅನೈತಿಕ ಪೋಲೀಸ್ಗಿರಿ ನಡೆಸುವವರು ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಆಮ್ ಆದ್ಮಿ ಪಾರ್ಟಿ ಅಲ್ಪಸಂಖ್ಯಾತ ಘಟಕ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅಝ್ಫರ್ ರಜಾಕ್ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಅನೈತಿಕ ಪೋಲಿಸ್ಗಿರಿ ನಡೆಸಿ ಅಮಾಯಕರನ್ನು ಬಡಿದು ವಿಜೃಂಭಿಸುವ, ತನ್ನ ಚುನಾವಣಾ ಅಸ್ತ್ರವಾಗಿ ಬಳಸಿ ಅಮಾಯಕರ ಮಾರಣಹೋಮ ನಡೆಸುವ ಒಂದು ರಾಷ್ಟ್ರೀಯ ಪಕ್ಷವನ್ನು ಹಾಗೂ ಹಲವರನ್ನು ಕೊಲ್ಲಲು ಬಂದ ಉಗ್ರನನ್ನು ಹೊಗಳುತ್ತಾ ತನ್ನ ಮತಬುಟ್ಟಿಗೆ ಧರ್ಮದ ಥಳುಕು ತೋರಿಸಿ ಗೆಲ್ಲಬಹುದೆಂಬ ಭ್ರಮೆಯಲ್ಲಿರುವ ಇನ್ನೊಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯನ್ನೂ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.