ಕಡಬ (ವಿಶ್ವ ಕನ್ನಡಿಗ ನ್ಯೂಸ್) : ಕೋಡಿಂಬಾಳ ನಿವಾಸಿಯಾಗಿರುವ ಅಬುಬಕ್ಕರ್ ರವರು ಹೃದಯಾಘಾತದಿಂದ ಮಕ್ಕಾದಲ್ಲಿ ನಿಧನರಾಗಿದ್ದಾರೆ. ಡಿಸೆಂಬರ್ 12 ರಂದು ಪುತ್ತೂರಿನಿಂದ ಪತ್ನಿ ಸಮೇತ ಉಮ್ರಾ ಯಾತ್ರೆಗೆ ಹೋದವರು 4 ಉಮ್ರಾ ಪೂರೈಸಿದ ಬಳಿಕ ಇಂದು ಬೆಳಿಗ್ಗೆ 5ನೇಯ ಬಾರಿ ಉಮ್ರಾ ಯಾತ್ರೆಗೆ ಹೊರಡುವ ಸಂದರ್ಭದಲ್ಲಿ ಪವಿತ್ರವಾದ ಮಕ್ಕಾದಲ್ಲಿ ನಿಧನರಾದರು.
ಇವರು ಕಡಬ ಕೋಡಿಂಬಾಳ ಅಮೀರ್ ಮತ್ತು ಶಾಫಿ ರವರ ತಂದೆಯಾಗಿದ್ದಾರೆ. ಮೃತದೇಹವು ಮಕ್ಕಾ ಪಟ್ಟಣದ ಮುಸ್ತಫಾ ಮಲಿಕ್ ಫೈಸಲ್ ಆಸ್ಪತ್ರೆಯಲ್ಲಿದೆ. ಮೃತರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಹಾಗು ಕುಟುಂಬದ ಸಮಾಧಾನಕ್ಕಾಗಿ ದುವಾ ಮಾಡಬೇಕೆಂದು ಉಮ್ರಾ ತಂಡದ ಅಮೀರ್ ಸಿರಾಜುದ್ದೀನ್ ಫೈಝಿ ಮಾಡನ್ನೂರು ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.