(www.vknews.in) ಕನ್ನಡ ರಾಜ್ಯೋತ್ಸವ ಮತ್ತು ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ನವೆಂಬರ್ 27ರಂದು ಇತಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಯೋಜಿಸಿದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ-2022 ಕಾರ್ಯಕ್ರಮದಲ್ಲಿ ಕೊಡಗಿನ ಸೋಮವಾರಪೇಟೆಯ ಭಾರತೀಯ ಹಾಕಿ ತಂಡದ ನಾಯಕ ಶ್ರೀಯುತ ಎಸ್ ವಿ ಸುನಿಲ್ ಅವರಿಗೆ ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಹೆಮ್ಮೆಯ ದುಬೈ ಕನ್ನಡ ಸಂಘದವರು ಭಾರತ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವದಲ್ಲಿ ಬೆಳಗಿದ ಸಾಧಕ ಕ್ರೀಡಾಪಟುಗಳನ್ನು ಗುರುತಿಸಿ ಎಲ್ಲಾ ವರ್ಷದ ದಸರಾ ಹಬ್ಬದಲ್ಲಿ ನೀಡಿ ಗೌರವಿಸಿತ್ತಾರೆ, ಈ ಮೊದಲು ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಓಟಗಾರತಿ ಶ್ರೀಮತಿ ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಡಾ.ಮಾಲತಿ ಹೊಳ್ಳ , ಭಾರತೀಯ ಹಾಕಿ ತಂಡದ ನಾಯಕ ಹೊನ್ನಪ್ಪ ಗೌಡ ಅವರಿಗೆ ನೀಡಿ ಗೌರವಿಸಿದ್ದಾರೆ. ಶ್ರೀಯುತ ಎಸ್ ವಿ ಸುನಿಲ್ ಅವರು ದಸರಾ ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ದುಬೈ ಕ್ರೀಡಾ ರತ್ನ ಪ್ರಶಸ್ತಿ ಪಡೆದರು, ಹೆಮ್ಮೆಯ ದುಬೈ ಕನ್ನಡ ಸಂಘದಲ್ಲಿ ಅಧ್ಯಕ್ಷರಾಗಿ ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿಯಾಗಿ ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕರಾಗಿ ರಫೀಕಲಿ ಕುಂಡಂಡ ಕೊಡಗು ಮತ್ತು ಸಮಿತಿ ಸದಸ್ಯರುಗಳಾಗಿ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ವಿಷ್ಣುಮೂರ್ತಿ ಮೈಸೂರು, ಮಧು ದಾವಣಗೆರೆ, ಅನಿತಾ ಬೆಂಗಳೂರು,, ಡಾ.ಸವಿತಾ ಮೈಸೂರು, ಮೊಹೀನ್ ಹುಬ್ಬಳ್ಳಿ, ವರದರಾಜ್ ಕೋಲಾರ, ಅಕ್ರಮ್ ಕೊಡಗು ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.