ಒಮಾನ್ (ವಿಶ್ವ ಕನ್ನಡಿಗ ನ್ಯೂಸ್) : ಒಮಾನ್ ನಲ್ಲಿ ವಲಸಿಗನಾಗಿದ್ದ ಕೇರಳದ ಯುವಕನೊಬ್ಬ ಮೃತಪಟ್ಟಿದ್ದಾನೆ. ಕಣ್ಣೂರು ಜಿಲ್ಲೆಯ ಕೊಟ್ಟಿಲದ ಒನಪರಂಬು ಹಾಜಿ ರಸ್ತೆಯ ನಿವಾಸಿ ಮುಹಮ್ಮದ್ ಕುಂಞಿ ಎಂಬವರ ಪುತ್ರ ಎಂ ಅಬ್ದುಲ್ ಜಲೀಲ್ (30) ಮೃತ ದುರ್ದೈವಿ. ಅವರು ಸುಹಾರ್ ಬಳಿಯ ಲಿವಾದಲ್ಲಿ ನಿಧನರಾದರು. ಅಬ್ದುಲ್ ಜಲೀಲ್ ಲಿವಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಮೃತರು ತಾಯಿ ನಫೀಸಾ, ಪತ್ನಿ ಹಿಸಾನಾ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಾನೂನು ವಿಧಿವಿಧಾನಗಳ ನಂತರ ಮೃತದೇಹವನ್ನು ಊರಿಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.