ದಾವಣಗೆರೆ (ವಿಶ್ವ ಕನ್ನಡಿಗ ನ್ಯೂಸ್) : ದಾವಣಗೆರಯ ವಿನೋಭ ನಗರದ ಅಮಾಯಕ ಯುವತಿಯೊಬ್ಬರನ್ನು ಕತ್ತು ಸೀಳಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಚಾಂದ್ ಸುಲ್ತಾನ(28) ಮೃತಪಟ್ಟ ಯುವತಿ. ಕಡುಬಡತನದಲ್ಲಿ ಹುಟ್ಟಿ ಕಷ್ಟ ಪಟ್ಟು ಓದಿ ಎಂಕಾಂ ಪದವಿ ಪಡೆದಿದ್ದ ಚಾಂದ್ ಸುಲ್ತಾನ, ಬಳಿಕ ನಗರದ ತೆರಿಗೆ ಸಲಹೆಗಾರ ಕೆ. ಮಹ್ಮದ್ ಭಾಷಾ ಅವರಲ್ಲಿ ಸಿ.ಎ. ಪದವಿಗೆ ತರಬೇತಿ ಪಡೆಯುತ್ತಿದ್ದರು.
ಮುಂದಿನ ತಿಂಗಳು ಚಾಂದ್ ಸುಲ್ತಾನಾಳ ಮದುವೆ ಆಕೆಯ ಸಹೋದ್ಯೋಗಿಯೊಂದಿಗೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಆಕೆಯನ್ನು ಮಾತನಾಡಿಸುವ ನೆಪದಲ್ಲಿ ಬಂದ ಸೋದರ ಸಂಬಂಧಿ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬ ಸೈಕೋ ಕಿರಾತಕ ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಚಾಂದ್ ಸುಲ್ತಾನಾ ಮನೆಯವರು ಐದು ವರ್ಷಗಳ ಹಿಂದೆ ಇವರಿಬ್ಬರಿಗೆ ಮದುವೆ ಮಾಡಲು ನಿರ್ಧಾರಿಸಿದ್ದರು. ಕುಟುಂಬಸ್ಥರು ಸಾದತ್ ಮನೆಗೆ ಹೋಗಿ ಆತನ ಕುಟುಂಬದ ಸದಸ್ಯರೊಂದಿಗೆ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆ ಸಂದರ್ಭದಲ್ಲಿ ಸಾದತ್ ಹಾಗೂ ಆತನ ಮನೆಯವರು ಈ ಮದುವೆಗೆ ಸಮ್ಮತಿ ನೀಡಿರಲಿಲ್ಲ. ಆದರೆ ಕಳೆದ ಕೆಲ ತಿಂಗಳುಗಳಿಂದ ಆರೋಪಿ ಸಾದತ್ ‘ನೀನು ನನ್ನನ್ನೇ ಮದುವೆಯಾಗಬೇಕು’ ಎಂದು ಚಾಂದ್ ಸುಲ್ತಾನಳ ಹಿಂದೆ ಬಿದ್ದಿದ್ದ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿಯೇ ಸಾದತ್ ಇಂದು ಚಾಂದ್ ಸುಲ್ತಾನಾಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ಆರೋಪಿ ಸಾದತ್ ಕೊಲೆ ಮಾಡಿದ ಬಳಿಕ ತಾನು ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿಗೆ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.