(www.vknews.in) : ಸುರತ್ಕಲ್ ನಲ್ಲಿ ಹತ್ಯೆಯಾದ ಮನೆಗೆ ಭೇಟಿ ನೀಡಿದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆಯಾದ ಡಾ.ಸುಮತಿ.ಎಸ್ಹೆಗ್ಡೆಯವರು ಕುಟುಂಬಕ್ಕೆ ಸಾಂತ್ವನ ನೀಡಿದರು ಮತ್ತು ಹತ್ಯೆಯನ್ನು ಖಂಡಿಸಿದರು.
ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಕೊಲೆಗಳಿಂದ ಸಮಾಜಕ್ಕೆ ಭೀತಿ ತರುತ್ತಿದೆ. ಸರಕಾರವು ಈ ವಿಚಾರದಲ್ಲಿ ವೈಫಲ್ಯವಾಗಿದೆ. ಸಮುದಾಯಗಳ ಮಧ್ಯೆ ಇರುವ ಈ ರೀತಿಯ ದ್ವೇಷಗಳು ಕೊನೆಯಾಗಬೇಕು. ಸರ್ಕಾರದ ಪ್ರತಿನಿಧಿಗಳು ಸಂತ್ರಸ್ತರ ಮನೆಗೆ ಭೇಟಿ ನೀಡುವಾಗಲೂ ಮತ್ತು ಪರಿಹಾರ ಹಂಚಿಕೆಯಲ್ಲೂ ತಾರತಮ್ಯ ತೋರಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಯವರ ಕೋಮು ಪ್ರಚೋದನಕಾರಿ ಹೇಳಿಕೆ ಕ್ರಿಯೆಗೆ ಪ್ರತಿಕ್ರಿಯೆಯ ದುಷ್ಪ್ರೇರಣೆಯ ದುರಂತವನ್ನು ಸಮಾಜವು ಈಗ ಅನುಭವಿಸುತ್ತಿದೆ. ಸಮಾಜದ ಒಂದು ವರ್ಗವು ಭಯದ ವಾತಾವರಣದಲ್ಲಿ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಪರಿಸ್ಥಿತಿಯು ಮುಂದುವರಿಯಬಾರದು. ಸಮಾಜದಲ್ಲಿ ಶಾಂತಿ,ಸೌಹಾರ್ದತೆ ಗಟ್ಟಿಗೊಳಿಸಲು ಮತ್ತು ಅಭಿವ್ರದ್ಧಿಯ ಪಥದತ್ತ ಸಾಗಲು ನಾವೆಲ್ಲರೂ ಕೈ ಜೋಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಮಾಧ್ಯಮದ ಮುಂದೆ ತನ್ನ ಹೇಳಿಕೆಯನ್ನು ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.