(www.vknews.in)ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕದ ಪ್ರಥಮ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ (KIC) ರಿಯಾದ್ ಸಮಿತಿ ವತಿಯಿಂದ KIC ಸಂಗಮ ಡಿ. 16 ರಂದು ಬಥದ ಅಲ್ ಮಾಸ್ ಆಡಿಟೋರಿಯಂನಲ್ಲಿ ನಡೆಯಿತು.
ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಕರ್ನಾಟಕ ರಿಯಾದ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಆರಿಫ್ ಬಾಖವಿ ಸಂಗಮವನ್ನು ಉದ್ಘಾಟಿಸಿದರು. ಮುಖ್ಯ ಭಾಷಣಗೈದ SKSSF ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ, KIC ಯ ಸಂಘಟನಾ ಕಾರ್ಯದರ್ಶಿ ವಾಗ್ಮಿ ಪ್ರೊ. ಅನೀಸ್ ಕೌಸರಿಯವರು ಸಮನ್ವಯ ಶಿಕ್ಷಣದ ಅಗತ್ಯತೆ ಮತ್ತು KIC ಯೋಜನೆಗಳನ್ನು ವಿವರಿಸಿದರು.
KIC ಸೌದಿ ನ್ಯಾಷನಲ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮರಕ್ಕಿಣಿ ಅಧ್ಯಕ್ಷತೆ ವಹಿಸಿದ್ದರು. SIC ಕರ್ನಾಟಕ ರಿಯಾದ್ ಸಮಿತಿಯ ಗೌರ್ವಾಧ್ಯಕ್ಷರಾದ ಮೊಹಮ್ಮದ್ ಅಲಿ ಫೈಝಿ, ದಾರುನ್ನೂರ್ ಕಾಶಿಪಟ್ನ ರಿಯಾದ್ ಸಮಿತಿ ಅಧ್ಯಕ್ಷರಾದ ಸಯ್ಯದ್ ಶಾಹುಲ್ ಹಮೀದ್ ತಂಗಳ್, KIC ಸೌದಿ ನ್ಯಾಷನಲ್ ಸಮಿತಿ ಕಾರ್ಯಧ್ಯಕ್ಷರಾದ ಇಕ್ಬಾಲ್ ಕುಂತೂರು, KIC GCC ಸಮಿತಿಯ ಕಾರ್ಯದರ್ಶಿ ನಿಜಾಮ್ ಅರಂದ, ಇಮಾಮ್ ಶಾಫಿ ಅಕಾಡಮಿ ರಿಯಾದ್ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಮಂಜೇಶ್ವರ, KIC ಜುಬೈಲ್ ಸಮಿತಿಯ ರಿಯಾಜ್ ಸುಳ್ಯ ಮುಖ್ಯ ಅಥಿತಿಗಳಾಗಿದ್ದರು. ಸಮಿತಿ ಕಾರ್ಯದರ್ಶಿ ಬಶೀರ್ ಅರಂಬೂರು ಸ್ವಾಗತಿಸಿ, ನೂತನ ಕಾರ್ಯದರ್ಶಿ ತಲ್ಹತ್ ಪರ್ಲಡ್ಕ ವಂದಿಸಿದರು. ಕೋಶಾಧಿಕಾರಿ ಅಹ್ಮದ್ ರಫೀಕ್ ಕೆ.ಪಿ. ಕಾರ್ಯಕ್ರಮ ಸಂಯೋಜಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.