(www.vknews.in) ಫ್ರೆಂಡ್ಸ್ ಪುತ್ತೂರು ಸ್ಪೋರ್ಟ್ಸ್ ಕ್ಲಬ್ ಮೊಟ್ಟೆತ್ತಡ್ಕ ಇದರ ವಾರ್ಷಿಕ ಮಹಾಸಭೆಯು ಮೊಟ್ಟೆತ್ತಡ್ಕದಲ್ಲಿ ರಫೀಕ್.ಎಮ್.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಫಾಝಿಲ್ ಅವರು ವರದಿ ವಾಚಿಸಿದರು.
ವಾರ್ಷಿಕ ವರದಿಯಲ್ಲಿ,ಕೊರೋನ ಸಂದರ್ಭದಲ್ಲಿ ಕಿಟ್ ವಿತರಣೆ,ರಂಝಾನ್ ಕಿಟ್ ವಿತರಣೆ,ರಕ್ತದಾನ ಶಿಬಿರ,ಬಡ ರೋಗಿಗೆ ಸಹಾಯ ಹಸ್ತ ಹಾಗೂ ನಿರ್ಗತಿಕ ಬಡ ಕುಟುಂಬಕ್ಕೆ ವಿವಾಹ ಸಹಾಯಾರ್ಥಗಳ ಖರ್ಚುವೆಚ್ಚ ಸುಮಾರು 4 ಲಕ್ಷಕ್ಕೂ ಹೆಚ್ಚು ಮೊತ್ತದ ಕುರಿತ ಮಾಹಿತಿ ನೀಡಲಾಯಿತು ಹಾಗೂ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಗೌರವಾಧ್ಯಕ್ಷರಾದ ಹನೀಫ್ ಪಿ.ಎಮ್ ಅವರು ಅಂಗೀಕರಿಸಿ ನೂತನ ಸಮಿತಿ ರಚಿಸಲು ಒಪ್ಪಿಗೆ ನೀಡಿದರು.ಸತತವಾಗಿ 3 ನೇ ಬಾರಿ ಫ್ರೆಂಡ್ಸ್ ಪುತ್ತೂರು ಸ್ಪೋರ್ಟ್ಸ್ ಕ್ಲಬ್ ಮೊಟ್ಟೆತ್ತಡ್ಕ ಇದರ ಅಧ್ಯಕ್ಷರಾಗಿ ಅಬ್ದುಲ್ ನವಾಝ್ ಆಕರ್ಷಣ್ ಅವರು ಹಾಗೂ ನೂತನ ಕಾರ್ಯಾಧ್ಯಕ್ಷರಾಗಿ ವಿಶ್ವ ಎಸ್.ಆರ್.ವಿ. ಅವರು ಆಯ್ಕೆಯಾದರು.
*ಫ್ರೆಂಡ್ಸ್ ಪುತ್ತೂರು ಸ್ಪೋರ್ಟ್ಸ್ ಕ್ಲಬ್ ಮೊಟ್ಟೆತ್ತಡ್ಕ
ನೂತನ ಸಮಿತಿ ಗೌರವಾಧ್ಯಕ್ಷರು:ಹನೀಫ್.ಪಿ.ಎಮ್. ಅಧ್ಯಕ್ಷರು:ಅಬ್ದುಲ್ ನವಾಝ್ ಆಕರ್ಷಣ್ ಕಾರ್ಯಾಧ್ಯಕ್ಷರು:ವಿಶ್ವ.ಎಸ್.ಆರ್.ವಿ ಪ್ರಧಾನ ಕಾರ್ಯದರ್ಶಿ:ಫಾಝಿಲ್ ಜೊತೆ ಕಾರ್ಯದರ್ಶಿ:ಬದುರು
ಸಲಹಾ ಸಮಿತಿ ರಫೀಕ್.ಎಮ್.ಕೆ ನಿಝಾರ್ ಅಬ್ದುಲ್ಲ ವಾಟರ್ ಅನ್ಸಾರ್ ಎಸ್.ಡಿ.ಎಮ್ ಶರೀಫ್ ಬೆಂಗಳೂರು ಹನೀಫ್ ಮಟನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.