(www.vknews.in) ನುಸ್ ರತ್ ಮಿಲಾದುನ್ನಭಿ ಸಂಘ(ರಿ ) ಶಾಂತಿಅಂಗಡಿ
ಬಿ. ಸಿ ರೋಡ್ ಬಂಟ್ವಾಳ ಇದರ ಆಶ್ರಯದಲ್ಲಿ ಇಸ್ಲಾಮಿಕ್ ದೀನಿ ಕ್ಲಾಸ್ ಕಾರ್ಯಕ್ರಮ ಇಂದು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವಠಾರದಲ್ಲಿ ನುಸ್ ರತ್ ಸಂಘ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಶಾಂತಿಅಂಗಡಿ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಉಮರ್ ಫಾರೂಖ್ ಫೈಝಿ ಫೈವಳಿ ಕೆ ಇವರು ದುವಾದೊಂದಿಗೆ ಉದ್ಘಾಟಿಸಿ, ಅಲ್ ಹಾಜಿ ಎಂ. ವೈ. ಅಶ್ರಫ್ ಫೈಝಿ ಕೊಡಗು ಖತೀಬರು ಎಂಜೆ ಎಂ ಇವರು ವೂಳೂ ವಿನ (ಅಂಗ ಶುದ್ದಿ ) ಯ ಬಗ್ಗೆ ಮನಸ್ಸಿಗೆ ತಟ್ಟುವ ರೀತಿ ಯ ದೀನಿ ಕ್ಲಾಸ್ ತೆಗೆದರು. ವೇದಿಕೆ ಯಲ್ಲಿ ಕೆ. ಪಿ. ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್, ಸಯ್ಯದ್ ಫಲುಲ್ ತಂಗಳ್ ಅಧ್ಯಕ್ಷರು ಎಂಜೆ ಎಂ ಮಿತ್ತಬೈಲ್, ಅಕ್ಬರ್ ಆಲಿ ಪೊನ್ನೋಡಿ ಪ್ರಧಾನಕಾರ್ಯದರ್ಶಿ ಎಂ ಜೆಎಂ ಮಿತ್ತಬೈಲ್,ಮುಹಮ್ಮದ್ ಮಜಲ್ ಗೌರವ ಅಧ್ಯಕ್ಷರು NMS, ಅಶ್ರಫ್ ಶಾಂತಿ ಅಂಗಡಿ ಪ್ರಧಾನ ಕಾರ್ಯದರ್ಶಿ NMS ಇವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.