(www.vknews.in) ; ಅಮಾಯಕ ಜಲೀಲ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಕೃತ್ಯವು ಕೋಮು ದ್ವೇಷದ ಮುಂದುವರಿದ ಭಾಗವಾಗಿದ್ದು ಇಂಥಾ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕದಿದ್ದರೆ ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕಬೇಕಾದೀತು ಎಂದು ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
ಸಮಾಜದ್ರೋಹಿ ದುಷ್ಟ ಶಕ್ತಿಗಳು ತಮ್ಮ ತಮಗಾಗದವರನ್ನು ನಿರಂತರ ದ್ವೇಷಿಸುತ್ತಾ, ಅವರ ಭಾವನೆಗಳನ್ನು ಕೆರಳಿಸುತ್ತಾ ಆಗಾಗ ಸಮಾಜದ ಶಾಂತಿ ಕದಡುವ ಈ ಮಾನವ ದ್ರೋಹಿಗಳು ವಿವಿಧ ರೂಪದಲ್ಲಿ ಪ್ರತ್ಯಕ್ಷಗೊಂಡು ಬಡಪಾಯಿಗಳ ರಕ್ತ ಹರಿಸಿ ವಿಕೃತ ಆನಂದ ಪಡೆಯುತ್ತಿದ್ದಾರೆ.
ಆಡಳಿತ ವರ್ಗ ಅಕ್ರಮಿಗಳ ಪರ ಮಾತ್ರ ಇದ್ದು ಒಂದು ವರ್ಗದ ಜನರು ಕೋಮು ದ್ವೇಷಕ್ಕೆ ಬಲಿಯಾದರೆ ಅವರ ಮನೆಗೆ ಮಾತ್ರ ಹೋಗಿ ಪರಿಹಾರ ನೀಡುವ ನೀಚ ಸಂಸ್ಕೃತಿಯನ್ನು ಮುಂದುವರಿಸಿದೆ. ಸಮಾನ ನ್ಯಾಯ ನೀಡಬೇಕಾದ ಸರಕಾರಗಳೇ ಅನ್ಯಾಯದ ಪರ ವಹಿಸುವುದರಿಂದ ಅಕ್ರಮಿಗಳಿಗೆ ದುಷ್ಕೃತ್ಯಗಳನ್ನೆಸೆಯಲು ಹಾದಿ ಸುಗಮವಾಗುತ್ತದೆ.
ಬಡಪಾಯಿ ವ್ಯಾಪಾರಿ ಜಲೀಲ್ ಹತ್ಯೆ ನಡೆಸಿದವರು ಯಾರೇ ಆದರೂ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ಮುಂದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ಮರುಕಳಿಸದಂತೆ ಕರ್ನಾಟಕ ಸರಕಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಮೂಲಕ ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.