(www.vknews.in); ಮಂಗಳೂರು. ಕಾಟಿಪಳ್ಳ ನೈತಂಗಡಿ ಎಂಬಲ್ಲಿ ವ್ಯಾಪಾರಿ ಜಲೀಲ್ ಹತ್ಯೆಯು ದ್ವೇಷ ರಾಜಕೀಯದಿಂದ ಕೂಡಿದ್ದು ಚುನಾವಣೆ ಬರುವಾಗ ಹೆಣವುರುಳಿಸಿ ಮತ ಗಳಿಸುವ ನೀಚ ಕೃತ್ಯ ಮತ್ತೆ ಮರುಕಳಿಸಿದೆ ಎಂದು ಸಾಮಾಜಿಕ ಹೋರಾಟಗಾರ ಡಾ! ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗದೆ ಸರ್ವ ಜನ ಬಾಂಧವರೊಂದಿಗೆ ಆತ್ಮೀಯತೆಯಿಂದಿದ್ದ ಜಲೀಲ್ ಅವರನ್ನು ಮಾನವ ರೂಪದ ರಾಕ್ಷಸರು ಹತ್ಯೆ ಮಾಡಿ ಸಮಾಜದಲ್ಲಿ ಸಜ್ಜನರಿಗೆ ಯಾವುದೇ ಬೆಲೆಯಿಲ್ಲ ಎಂಬ ಪರೋಕ್ಷ ಸಂದೇಶ ಸಾರಿದ್ದಾರೆ. ಮನುಷ್ಯ ಜೀವ ಅಮೂಲ್ಯ ವಾಗಿದ್ದು ಹಿಂದು,ಮುಸ್ಲಿಂ, ಕ್ರೈಸ್ತ ಯಾರು ಮೃತರಾದರೂ ಅದು ಸಮಾಜಕ್ಕೆ ನೋವುಂಟು ಮಾಡುತ್ತದೆ.
ಆದರೆ ಮುಸ್ಲಿಮರು ಮೃತರಾದರೆ ಅತ್ತ ತಿರುಗಿಯೂ ನೋಡದ ನಮ್ಮ ಆಡಳಿತ ವ್ಯವಸ್ಥೆ ಬೇರೆ ದರ್ಮದವರು ಹತ್ಯೆ ಹೊಂದಿದರೆ ಕೂಡಲೇ ಅವರ ಮನೆಗೆ ಶಾಸಕರು ಧಾವಿಸಿ ಎಲ್ಲಾ ರೀತಿಯ ಸಹಾಯ ಸರ್ಕಾರ ದಿಂದ ಪರಿಹಾರ ಗಳನ್ನೂ ಕೊಡಿಸಿ ಮರಣದ ಮನೆಯಲ್ಲೂ ರಾಜಕೀಯ ಮಾಡುತ್ತಿದೆ.
ಪರಸ್ಪರ ಪ್ರೀತಿ,ವಿಶ್ವಾಸದಿಂದಿದ್ದು ಸೌಹಾರ್ದಯುತ ಸಮಾಜ ಕಟ್ಟಬೇಕಾದ ಹಿಂದೂ,ಮುಸ್ಲಿಂ ಸಮುದಾಯ ಕೋಮುದ್ವೇಷದಿಂದ ಈ ರೀತಿ ಕೊಲೆ,ಗಲಭೆ,ಅಶಾಂತಿ ನಿರ್ಮಾಣ ಮಾಡುತ್ತಲೇ ಇದ್ದರೆ ಭಾರತದಲ್ಲಿ ಶಾಂತಿ ಮರೀಚಿಕೆ ಯಾಗಬಹುದು. ತನ್ನ ಹೊಟ್ಟೆಪಾಡಿನ ವ್ಯಾಪಾರ ಮಾಡುತ್ತಾ ಯಾರಿಗೂ ತೊಂದರೆ ಕೊಡದ ಜಲೀಲ್ ಅವರನ್ನು ಹತ್ಯೆ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಅವರನ್ನು ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ದುರ್ಬಲ ಕಾನೂನಿನ ಕಾರಣ ಇಲ್ಲಿ ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಿದ್ದು ಅಪರಾಧಿಗಳ ಜಾತಿ ನೋಡದೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಂಡು ಅಪರಾಧಿಗಳಿಗೆ ಭಯ ಹುಟ್ಟಿಸಿ ನಾಗರಿಕ ಸಮಾಜಕ್ಕೆ ಕಾನೂನಿನ ಮೇಲೆ ಗೌರವ ಬರುವಂತಾಗಲು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.